ಕಲಬುರಗಿ: ಗಣಿತವನ್ನು ಉತ್ಸಾಹದಿಂದ ಕಲಿಯಲು ಯುವ ಮನಸ್ಸುಗಳನ್ನು ಪ್ರೇರೇಪಿಸುವ ಅಗತ್ಯವಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕೇಂದ್ರೀಯ ವಿವಿಯಲ್ಲಿ ಗಣಿತ ವಿಭಾಗ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟಿçÃಯ ಗಣಿತ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣಿತ, ಕಂಪ್ಯೂಟಿAಗ್, ಆಟ ಮತ್ತು ಒಂದು ಮಿಲಿಯನ್ ಡಾಲರ್ಸ್ ಕುರಿತು ಸುರತ್ಕಲ್‌ನ ಎನ್‌ಐಟಿಯ ಪ್ರೊ.ಬಿ.ಆರ್. ಶಂಕರ್ ಉಪನ್ಯಾಸ ನೀಡಿ, ಬ್ರಹ್ಮ ಗೋಪುರ, ನೈಟ್ಸ್ ಟೂರ್ ಸಮಸ್ಯೆ ಮತ್ತು ಶತಮಾನಗಳಿಂದ ಗಣಿತಜ್ಞರನ್ನು ಕುತೂಹಲ ಕೆರಳಿಸಿದ ಇತರ ಹಳೆಯ ಪ್ರಶ್ನೆಗಳಂತಹ ಪ್ರಸಿದ್ಧ ಗಣಿತದ ಒಗಟು ಬಗ್ಗೆ ತಿಳಿಸಿದರು.
ಸುರತ್ಕಲ್‌ನ ಎನ್‌ಐಟಿಯ ಡಾ.ವಿದ್ಯಾಧರ್ ಉಪಾಧ್ಯ ಜನರೇಟಿವ್ ಮಾಡೆಲ್ಸ್ ಕುರಿತು ಮಾತನಾಡಿ, ಆಧುನಿಕ ಕೃತಕ ಬುದ್ಧಿಮತ್ತೆ ಮಾದರಿಗಳು ಸಂಭವನೀಯತೆ ವಿತರಣಾ ಮಾದರಿ ಬಳಸಿಕೊಂಡು ಚಿತ್ರಗಳನ್ನು ಉತ್ಪಾದಿಸುತ್ತವೆ. ಗೌಸಿಯನ್ ವಿತರಣೆಗಳು, ನರಮಂಡಲ ಜಾಲಗಳು ಮತ್ತು ಆಳವಾದ ಕಲಿಕೆಯ ವಿಧಾನಗಳಂತಹ ಪರಿಕಲ್ಪನೆಗಳು ಇಂದಿನ ಜಗತ್ತಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.
ಭೌತ ವಿಜ್ಞಾನ ನಿಕಾಯ ಡೀನ್ ಡಾ.ಭರತಕುಮಾರ್ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಡಾ.ಸುಮುಖ ಪ್ರಾಸ್ತಾವಿಕ ಮಾತನಾಡಿದರು. ಡಾ.ಎನ್.ಸಂದೀಪ್, ಡಾ. ದೇವಿಕಾ, ಡಾ.ಮೇಘನಾ ಇತರರಿದ್ದರು. ಗಣಿತ ವಿಭಾಗದ ಮುಖ್ಯಸ್ಥ ಡಾ.ಜಿ. ಜನಾರ್ದನ ರೆಡ್ಡಿ ಸ್ವಾಗತಿಸಿದರು. ಡಾ.ಸಮೀರ್ ಕರ್ ವಂದಿಸಿದರು.