ಕುಶಾಲನಗರ: ಶ್ರೀ ಗಣಪತಿ ದೇವರ ಜಾತ್ರೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಬುಧವಾರ ತೆಪ್ಪೋತ್ಸವ ಸಂಭ್ರಮದಿಂದ ಜರುಗಿತು. ಬುಧವಾರ ಸಂಜೆ ಗಣಪತಿ ಉತ್ಸವಮೂರ್ತಿ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಕಾವೇರಿ ನದಿಯ ಸೋಪಾನಕಟ್ಟೆ ದಡದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಸಂಪ್ರದಾಯದಂತೆ ದೋಣಿಯಲ್ಲಿ ಗಣಪತಿ ಕೂರಿಸಿ ಪವಿತ್ರ ಕಾವೇರಿ ನದಿಯಲ್ಲಿ 3 ಪ್ರದಕ್ಷಿಣೆ ಹಾಕಿ ತೆಪ್ಪೋತ್ಸವ ಕಾರ್ಯವನ್ನು ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ನಡೆಸಲಾಯಿತು. ತೆಪ್ಪೋತ್ಸವ ಅಂಗವಾಗಿ ಮಹಿಳೆಯರು ಕಾವೇರಿ ನದಿಗೆ ಪೂಜೆ ಸಲ್ಲಿಸಿ ದೀಪಗಳನ್ನು ನೀರಿನಲ್ಲಿ ಹರಿಯಬಿಟ್ಟರು. ಪ್ರತಿ ವರ್ಷಕ್ಕಿಂತ ತೆಪ್ಪೋತ್ಸವ ಪೂಜಾ ಕಾರ್ಯಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಧ್ಯಕ್ಷ ವಿ.ಎನ್.ವಸಂತಕುಮಾರ್ ತಿಳಿಸಿದ್ದಾರೆ. ದೇವಾಲಯ ಸಮಿತಿ ಪುಂಡರಿಕ್ಷಾಕ, ಕೆ.ಎನ್. ದೇವರಾಜ್, ಚಂದ್ರು, ರಾಘವೇಂದ್ರ ಭಟ್, ನವೀನ್ ಇತರರು ಹಾಜರಿದ್ದರು.