ಚಿಂತಾಮಣಿ: ಕರೊನಾ ಎಫೆಕ್ಟ್‌ನಿಂದ ಯುವಕರ ಸಂಘಟನೆಗಳು ದೊಡ್ಡದೊಡ್ಡ ಗಣಪತಿಗಳನ್ನು ಪ್ರತಿಷ್ಟಾಪನೆ ಮಾಡಲು ಹಿಂದೇಟು ಹಾಕಿರುವುದರಿಂದ ದೊಡ್ಡ ಗಣಪತಿಗಳನ್ನು ಕೇಳುವವರಿಲ್ಲದೆ ವ್ಯಾಪಾರಿಗಳು ಮತ್ತು ತಯಾರಕರ ಕಂಗಾಲಾಗಿದ್ದಾರೆ.
ಗಣಪತಿ ಹಬ್ಬಕ್ಕೆ ಒಂದೆರಡು ವಾರಗಳು ಇರುವಾಗಲೇ ಎಲ್ಲೆಡೆ ವಿಘ್ನೇಶ್ವರನ ಥರಾವಾರಿ ಆಕಾರದ ವಿಭಿನ್ನ ಅಳತೆಯ ಮೂರ್ತಿಗಳು ನಗರದ ಪ್ರಮುಖ ವೃತ್ತಗಳಲ್ಲಿ ಮತ್ತು ರಸ್ತೆಗಳಲ್ಲಿ ರಾರಾಜಿಸುತ್ತಿದ್ದವು. ಆದರೆ ಈ ವರ್ಷ ಕರೊನಾದಿಂದ ಗಣಪತಿ ಮೂರ್ತಿ ಕೆಳುವವರಿಲ್ಲವಾಗಿದೆ. ವರ್ಷ ಪೂರ್ತಿ ತಯಾರಿಸಿದ ಗಣಪತಿ ಮೂರ್ತಿಗಳೆಲ್ಲ ಅವುಗಳೆಲ್ಲ ಶೆಡ್ ಸೇರಿವೆ. ಇದರಿಂದ ವ್ಯಾಪಾರಸ್ಥರಿಗೆ ದೊಡ್ಡ ಹೊಡೆತ ಬಿದಿದ್ದೆ.
ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್)ಯಲ್ಲಿ ಮೂರ್ತಿಗಳನ್ನು ಕೈಬಿಟ್ಟ ತಯಾರಕರು ದೊಡ್ಡ ದೊಡ್ಡ ಮೂರ್ತಿಗಳನ್ನು ಪೇಪರ್, ಕಚ್ಚಾ ಕಡಲೆ ಹಿಟ್ಟು, ಗೆಣಸು, ಬಿಳಿಯ ರಂಗೋಲಿ ಪುಡಿ ಮಿಶ್ರ ಮಾಡಿ ಇದಕ್ಕೆ ರಸಾಯನಿಕ ಬಣ್ಣಗಳನ್ನು ಬಳಸದೆ ಪೇಪರ್ ಗಣಪತಿಗಳನ್ನು ತಯಾರಿ ಮಾಡಿಕೊಂಡಿದ್ದಾರೆ. ನೆರೆಯ ರಾಜ್ಯಗಳಿಗೆ ಸರಬರಾಜು ಮಾಡೋಣ ಎಂದರೆ ಅಲ್ಲಿಯೂ ಇದೇ ಪರಿಸ್ಥಿತಿ ಇರುವುದರಿಂದ ಮೂರ್ತಿ ತಯಾರಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಪೂರ್ವಿಕರ ಕಾಲದಿಂದಲೂ ಗಣಪತಿ ಮೂರ್ತಿಗಳ ತಯಾರಿಕೆ ವೃತ್ತಿ ಮಾಡುತ್ತಿದ್ದೇವೆ. ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ವಿವಿಧೆಡೆಯಿಂದ ತರಿಸಿ ಮೂರ್ತಿಗಳನ್ನು ಮಾಡುತ್ತಿದ್ದೇವೆ. ಕರೊನಾದಿಂದ ಸಾಮೂಹಿಕ ಗಣಪತಿ ಸ್ಥಾಪನೆಗೆ ಜನ ಹಿಂದೇಟು ಹಾಕಿರುವ ಪರಿಣಾಮ ಮೂರ್ತಿಗಳನ್ನು ಖರೀದಿ ಮಾಡುವವರೇ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು ವ್ಯಾಪಾರಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು. ಶ್ರೀನಿವಾಸ್, ಮನೋಜ್ ಮತ್ತು ಗಂಗರಾಜ್ ಸಹೋದರರು, ಮೂರ್ತಿ ತಯಾರಕರು. ಮೂರ್ತಿಗಳನ್ನು ತಯಾರು ಮಾಡುವ ಶಿಲ್ಪಿಗಳು ಮತ್ತು ವ್ಯಾಪಾರಸ್ಥರು ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸದ್ದಾರೆ. ಆದರೆ ಗಣಪತಿ ಮೂರ್ತಿಗಳ ಪ್ರತಿಷ್ಟಾನೆ ಮಾಡುವ ಬಗ್ಗೆ ಸರ್ಕಾರದಿಂದ ನಿರ್ದಿಷ್ಟ ಸುತ್ತೋಲೆ ಇನ್ನು ಬಂದಿಲ್ಲ. ಉಮಾಶಂಕರ್, ನಗರಸಭೆ ಪ್ರಭಾರಿ ಪೌರಾಯುಕ್ತ