ಜಿಲ್ಲೆ

ಗಣತಿಯಲ್ಲಿ ನಿಖರ ಮಾಹಿತಿ ನಮೂದಿಸಲಿ

ಹುಕ್ಕೇರಿ: ಬೆಳಗಾವಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚೌವ್ಹಾಣ ಉಪಸ್ಥಿತಿಯಲ್ಲ್ಲಿ ಬಿಜೆಪಿ ಒಬಿಸಿ ಮೋರ್ಚಾದಿಂದ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ. ಒಬಿಸಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭ ಯಶಸ್ವಿಗೊಳಿಸಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸಮಾವೇಶದ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಮತ್ತು ಜನಗಣತಿ ಕುರಿತು ಜನ ಜಾಗೃತಿ ಮೂಡಿಸಲು ಈ ಸಮಾವೇಶ ಆಯೋಜಿಸಲಾಗಿದೆ. ಗಣತಿ ಸಮಯದಲ್ಲಿ ಎಲ್ಲ ಸಮುದಾಯದವರು ಜಾತಿ ಮತ್ತು ಅಂಕಿ ಸಂಖ್ಯೆ ಸರಿಯಾಗಿ ನಮೂದಿಸುವಂತೆ ಬಿಜೆಪಿ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಬೀದಿ ದೀಪಗಳು ಬೆಳಗುತ್ತಿಲ್ಲವೆಂದು ಕೆಲವರು ದೂರಿದರು. ಶಾಸಕ ನಿಖಿಲ ಕತ್ತಿ ಪುರಸಭೆ ಅಧಿಕಾರಿಗಳನ್ನು ಕರೆಸಿ ಸರಿಪಡಿಸುವಂತೆ ಸೂಚಿಸಿದರು.

ಇದೇ ವೇಳೆ ಶಾಸಕ ನಿಖಿಲ ಕತ್ತಿ ಅವರನ್ನು ಬಿಜೆಪಿ ಒಬಿಸಿ ಮೋರ್ಚಾ ಘಟಕದಿಂದ ಸನ್ಮಾನಿಸಲಾಯಿತು.

ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಸತ್ತೆಪ್ಪ ನಾಯಿಕ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಭೀಮರಾಜ ಒಡೆಯರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶೀತಲ ಬ್ಯಾಳಿ, ರಾಹುಲ ಪಾಟೀಲ, ಬಿಜೆಪಿ ವಕ್ತಾರ ಗೋಪಾಲ ಚನಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಮುಖಂಡರಾದ ಗುರುರಾಜ ಕುಲಕರ್ಣಿ, ಕಲಗೌಡ ಪಾಟೀಲ, ಮಹಾನಿಂಗ ಸನದಿ, ಸಂಗಮೇಶ ದುರದುಂಡಿ, ರಾಜು ಮುನ್ನೋಳಿ, ಅಪ್ಪುಸ್ ತುಬಚಿ, ಅಪ್ಪಣ್ಣ ಖಾತೇದಾರ ಇತರರು ಇದ್ದರು.