ಗೋಕಾಕ: ಜಾನುವಾರು ಗಣತಿ ತರಬೇತಿಯ ಮುಖ್ಯ ಉದ್ದೇಶ ದತ್ತಾಂಶ ಸಂಗ್ರಹಣೆಯಾಗಿದ್ದು, ಎಣಿಕೆದಾರರ ಪಾತ್ರ ಪ್ರಮುಖ ಎಂದು ಧಾರವಾಡದ ಪಶುಪಾಲನಾ ಮತ್ತು ಪಶು ವೆದ್ಯಕಿಯ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಲ್. ಪರಮೇಶ್ವರನಾಯಿಕ ಹೇಳಿದರು.
ನಗರದ ಪಶು ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗೋಕಾಕ ಮತ್ತು ಮೂಡಲಗಿ ತಾಲೂಕಿನ 21ನೇ ಜಾನುವಾರು ಗಣತಿ ತರಬೇತಿ ಕಾರ್ಯಕ್ರಮದ ಅಂಗವಾಗಿ ಮೇಲ್ವಿಚಾರಕರು ಮತ್ತು ಎಣಿಕೆದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದತ್ತಾಂಶ ಸಂಗ್ರಹದಿಂದ ಇಲಾಖೆಗೆ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಆಯಾ ಪ್ರದೇಶಗಳಲ್ಲಿನ ಜಾನುವಾರುಗಳ ತಳಿಗಳು, ಕುಕ್ಕುಟಗಳು ಮತ್ತು ಬೀದಿನಾಯಿಗಳ ಮಾಹಿತಿ ಸರಿಯಾದ ರೀತಿಯಲ್ಲಿ ಸಂಗ್ರಹಿಸಬೇಕು ಎಂದರು.
ಬೆಳಗಾವಿ ಪಶುಪಾಲನಾ ಮತ್ತು ಪಶು ವೆದ್ಯಕಿಯ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೊಲೇರ ಮಾತನಾಡಿ, ಗಣತಿ ಕಾರ್ಯವು ಮೊಬೆಲ್ ಅಪ್ಲಿಕೇಷನ್ ಮೂಲಕ ಜರುಗುತ್ತಿದ್ದು, ಜಿಲ್ಲೆಯಲ್ಲಿ ಅಂದಾಜು 11,60,241 ಕುಟುಂಬಗಳಿವೆ. 247 ಗಣತಿದಾರರು ಹಾಗೂ 54 ಮೇಲ್ವಿಚಾರಕರು ಗಣತಿ ಮಾಡಲಿದ್ದಾರೆ ಎಂದರು. ಜಾನುವಾರು ರೋಗಗಳ ಕಣ್ಗಾವಲು ಯೋಜನೆ ಉಪನಿರ್ದೇಶಕ ಡಾ.ರಮೇಶ ದೊಡಮನಿ, ಔಷಧ ಭಂಡಾರ ಮುಖ್ಯ ಪಶುವೆದ್ಯಾಧಿಕಾರಿ ಡಾ.ಆನಂದ ರೆಡ್ಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕು ಮುಖ್ಯಪಶು ವೆದ್ಯಾಧಿಕಾರಿ ಡಾ.ಮೋಹನ ಕಮತ ಉಪಸ್ಥಿತರಿದ್ದರು. ಪಶು ವೆದ್ಯಾಧಿಕಾರಿ ಡಾ.ಎಸ್.ಆರ್. ಕೌಜಲಗಿ ಸ್ವಾಗತಿಸಿ, ವಂದಿಸಿದರು.