ಬಾಗಲಕೋಟೆ ನಗರದ ವಾಸವಿ ಚಿತ್ರಮಂದಿರದ ಬಳಿಯಿರುವ ಗುಳೇದ ಆಸ್ಪತ್ರೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯ ಕಾರ್ತಿಕ ಪಾಟೀಲ ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಅಪೂರ್ವ ಗುಳೇದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಜಿಲ್ಲೆ

ಗಡ್ಡೆ ಹೊರತೆಗೆಯುವಲ್ಲಿ ಗುಳೇದ ಆಸ್ಪತ್ರೆ ವೈದ್ಯರು ಯಶಸ್ವಿ

ಬಾಗಲಕೋಟೆ: ಬಾಲಕರಿಬ್ಬರ ಮೂಗಿನಲ್ಲಿರುವ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಗುಳೇದ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದ್ದು, ಇದೊಂದು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿರುವ ಹೆಗ್ಗಳಿಕೆಗೆ ಗುಳೇದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಪಾತ್ರವಾಗಿದೆ.

ಬಾಗಲಕೋಟೆ ನಗರದ ವಾಸವಿ ಚಿತ್ರಮಂದಿರದ ಬಳಿಯಿರುವ ಗುಳೇದ ಆಸ್ಪತ್ರೆಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯ ಕಾರ್ತಿಕ ಪಾಟೀಲ, ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಅಪೂರ್ವ ಗುಳೇದ ಅಪರೂಪದ ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ಹಂಚಿಕೊಂಡರು. ಗುಳೇದ ಆಸ್ಪತ್ರೆಯ ಕಿವಿ ಮೂಗು ಗಂಟಲು ವಿಭಾಗದಿಂದ ಎರಡು ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದೊಂದು ಮೂಗಿನಲ್ಲಿ ಕಂಡುಬರುವ ಅಪರೂಪದ ಗಡ್ಡೆಯಾಗಿದೆ. ಅತೀವೇಗವಾಗಿ ಇಂತಹ ಗಡ್ಡೆ ಬೆಳವಣಿಗೆ ಆಗುತ್ತದೆ. ಬಹಳ ಜಾಗರೂಕತೆಯಿಂದ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ , ವೈದ್ಯರ ತಂಡ ಅಪರೂಪದ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ವಿಜಯಪುರ ಜಿಲ್ಲೆಯ ನಿಡಗುಂದಿ ಬಾಲಕ ಈರಣ್ಣ ಹಾಗೂ ಜಮಖಂಡಿ ಬಾಲಕ ರಾಘವೇಂದ್ರ ಎಂಬುವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮೂಗಿನಲ್ಲಿರುವ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ. ಸದ್ಯ ಬಾಲಕರಿಬ್ಬರು ಆರೋಗ್ಯದಿಂದ ಇದ್ದಾರೆ. ಅಪರೂಪದ ರೋಗ ಇದಾಗಿದ್ದು, ೧೩ವರ್ಷಗಳಿಂದ ೧೮ ವರ್ಷಗೊಳಗಾಗಿ ಮೂಗಿನಲ್ಲಿ ಗಡ್ಡೆ ಕಾಣಿಸಿಕೊಳ್ಳುತ್ತದೆ. ರಕ್ತನಾಳ ಸಂಚಲನ ಇರುವುದಿಲ್ಲ. ವಿವಿಧ ಕಾಯಿಲೆಗಳು ಉಂಟಾಗುತ್ತವೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿದರೆ ಕಾಯಿಲೆಯನ್ನು ಗುಣಪಡಿಸಬಹುದು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಅಪೂರ್ವ ಗುಳೇದ ಮಾತನಾಡಿ, ಇಂತಹ ರೋಗ ಕಂಡುಬಂದವರು ದೂರದ ಬೆಂಗಳೂರಿಗೆ ಹೋಗಿ ಶಸöಚಿಕಿತ್ಸೆಗೊಳಗಾಗುತ್ತಿದ್ದರು. ಈಗ ಬಾಗಲಕೋಟೆಯ ಗುಳೇದ ಆಸ್ಪತ್ರೆಯಲ್ಲಿ ಅಪರೂಪದ ರೋಗಕ್ಕೆ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ವೈದ್ಯರು ಯಶಸ್ಸು ಕಂಡಿದ್ದಾರೆ ನಮ್ಮಲ್ಲಿ ಶಸ್ತ್ರಚಿಕಿತ್ಸೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಇಂತಹ ಶಸö ಚಿಕಿತ್ಸೆ ಆಸ್ಪತ್ರೆಯಲ್ಲಿ ಮೊದಲ ಭಾರಿಗೆ ನಡೆದಿದೆ ಎಂದು ತಿಳಿಸಿದರು.

ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವಲ್ಲಿ ಡಾ, ಕವಿತಾ ಪಲ್ಲೇದ, ಅರಿವಳಿಕೆ ತಜ್ಞಶೃತಿ ಪಾಟೀಲ, ಹಾಗೂ ಇಂಟರ್ವೆನ್ಸಲï ಕಾರ್ಡಿಯಾಲಜಿ ಸಮೀರ ಕುಲಕರ್ಣಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಶ್ರಮಕ್ಕೆ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.