ಕಕ್ಕೇರಾ: ಕೃಷ್ಣಾ ನದಿ ಪ್ರವಾಹದಿಂದಾಗಿ ನೀಲಕಂಠರಾಯನಗಡ್ಡಿ ಕಿರು ಸೇತುವೆ ಮುಳುಗಡೆ ಭೀತಿಯಲ್ಲಿದ್ದು, ಗಡ್ಡಿ ನಿವಾಸಿಗಳು ಹೊರಜಗತ್ತಿನ ಸಂಪರ್ಕ ಕಡಿತಗೊಳ್ಳುವ ಆತಂಕದಲ್ಲಿದ್ದಾರೆ.
ಮಹಾರಾಷ್ಟçದ ಕೃಷ್ಣಾಕಣಿವೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯ ಮೂಲಕ ಆಲಮಟ್ಟಿ ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೂ 3 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಪ್ರವಾಹ ಉಂಟಾಗಿದೆ.
ನಡುಗಡ್ಡಿ ನಿವಾಸಿಗಳ ಹೊರಜಗತ್ತಿನ ಸಂಪರ್ಕಕ್ಕಾಗಿ ನಿರ್ಮಿಸಿರುವ ಕಿರು ಸೇತುವೆ ಮುಳುಗಡೆ ಭೀತಿಯಲ್ಲಿದೆ. ಬಸವಸಾಗರದಿಂದ ಇನ್ನೂ 50 ಸಾವಿರ ಕ್ಯೂಸೆಕ್ ನೀರು ಬಿಟ್ಟಲ್ಲಿ ಅಥವಾ ಬಾಗಲಕೋಟೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾದರೆ ಈ ಕಿರು ಸೇತುವೆ ಸಂಪೂರ್ಣ ಮುಳುಗಲಿದೆ. ಪ್ರವಾಹ ಇಳಿಮುಖ ಆಗುವವರೆಗೂ ಆರೋಗ್ಯ, ಶುದ್ಧ ಕುಡಿಯುವ ನೀರು, ಪಡಿತರ ವ್ಯವಸ್ಥೆಯಂಥ ಹಲವಾರು ಸಮಸ್ಯೆಗಳನ್ನು ನಿವಾಸಿಗಳು ಎದುರಿಸಬೇಕಾಗುತ್ತದೆ.
ನೀಲಕಂಠರಾಯನಡ್ಡಿಯಲ್ಲಿ ಸುಮಾರು 64 ಕುಟುಂಬದ 309 ಪರಿಶಿಷ್ಟ ಪಂಗಡ ಜನರು ವಾಸಿಸುತ್ತಿದ್ದು, ಕೃಷಿಯನ್ನೇ ಅವಲಂಬಿಸಿದ್ದಾರೆ. ಗಡ್ಡಿಗೆ ಸರ್ಕಾರದಿಂದ ಶಾಲೆ, ವಿದ್ಯುತ್ ಸಂಪರ್ಕ, ಸಂಚಾರಕ್ಕಾಗಿ ಕಿರು ಸೇತುವೆ ನಿರ್ಮಿಸಿದ್ದನ್ನು ಬಿಟ್ಟರೆ ಬೇರಾವ ಮೂಲಸೌಲಭ್ಯ ಒದಗಿಸಿಲ್ಲ ಎಂಬುದು ಸ್ಥಳೀಯರು ಗೋಳು ತೋಡಿಕೊಳ್ಳುತ್ತಾರೆ.
ಕೃಷ್ಣಾ ನದಿ ಮಧ್ಯದಿಂದ ಎರಡು ಭಾಗವಾಗಿರುವ ನೀಲಕಂಠರಾಯನಗಡ್ಡಿ ಬಹಳಷ್ಟು ಎತ್ತರದ ಪ್ರದೇಶದಲ್ಲಿದೆ. ಹತ್ತಾರು ಲಕ್ಷ ಕ್ಯೂಸೆಕ್ ನೀರು ಬಿಟ್ಟರೂ ಆರಾಧ್ಯದೈವ ನೀಲಕಂಠೇಶ್ವರ ಕೃಪೆಯಿಂದ ಈ ನಡುಗಡ್ಡಿ ಮುಳುಗಡೆ ಆಗುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಜು.24ರಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಗಡ್ಡಿ ತೀರಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ನದಿಗೆ ಹೆಚ್ಚಿನ ನೀರು ಬಂದು ಪ್ರವಾಹ ಉಂಟಾದಲ್ಲಿ ನಡುಗಡ್ಡಿ ತೊರೆಯಬೇಕು ಎಂದು ಮನವೊಲಿಸಿದರು. ಮೊಬೈಲ್‌ನಲ್ಲಿ ಸದಾ ಸಂಪರ್ಕದಲ್ಲಿರುವAತೆ ತಹಸೀಲ್ದಾರ್ ಕೆ.ವಿಜಯಕುಮಾರ ಅವರಿಗೆ ಸೂಚಿಸಿದ್ದರು.
ಕಲುಷಿತ ನೀರು ಸೇವನೆ: ಕೊರೆದಿದ್ದ ಕೊಳವೆಬಾವಿ ಬೇಸಿಗೆಯಲ್ಲಿ ಬತ್ತಿದ್ದರಿಂದ ಗಡ್ಡಿ ಜನರಿಗೆ ಶುದ್ಧ ಕುಡಿಯುವ ನೀರಿಲ್ಲ. ವಾರದಿಂದ ಪ್ರವಾಹದಲ್ಲಿ ಕಸಕಡ್ಡಿಗಳಿಂದ ಕೂಡಿದ ನೀರನ್ನೇ ಸೇವಿಸುತ್ತಿದ್ದು, ಶೀತ, ನೆಗಡಿ, ಕೆಮ್ಮು, ಚಳಿಜ್ವರ ಸೇರಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ವೀಣಾ ಚಟ್ಟರಕಿ ನೇತೃತ್ವದ ತಂಡ ಶನಿವಾರ ಗಡ್ಡಿ ತೀರದಲ್ಲಿ ಗರ್ಭಿಣಿಯರನ್ನು ಪರೀಕ್ಷಿಸಿ 108 ವಾಹನದಲ್ಲಿ ಸಂಬAಧಿಕರ ಮನೆಗಳಿಗೆ ಕಳುಹಿಸಿಕೊಟ್ಟಿದೆ.