ಖಿಳೇಗಾಂವದಲ್ಲಿ ಹಮ್ಮಿಕೊಂಡಿದ್ದ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವವನ್ನು ಗಣ್ಯರು ಉದ್ಘಾಟಿಸಿದರು. ರವಿ ನಾಗಗೋಳ, ವೀಣಾ ಕೀಡದಾಳ, ಶಾಮರಾವ ಪೂಜಾರಿ, ಸತೀಶ ಹೊನ್ನಾಗೊಳ, ಧರೇಪ್ಪ ಗುರುಬಸಪ್ಪಗೋಳ ಇತರರಿದ್ದರು.  
ಜಿಲ್ಲೆ

ಗಡಿಯಲ್ಲಿ ಕನ್ನಡ ಉಳಿಯಬೇಕಿದೆ

ಸಂಬರಗಿ, ಬೆಳಗಾವಿ: ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ಗಡಿಯಲ್ಲಿ ಕನ್ನಡ ಉಳಿಯುತ್ತದೆ ಎಂದು ಗ್ರಾಪಂ ಅಧ್ಯಕ್ಷ ರವಿ ನಾಗಗೋಳ ಹೇಳಿದರು.

ಖಿಳೇಗಾಂವ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗಡಿಯಲ್ಲಿ ಕನ್ನಡ ಭಾಷೆ ಜಾಗೃತವಾಗಬೇಕಿದೆ ಎಂದರು.

ವೀಣಾ ಕೀಡದಾಳ, ಶಾಮರಾವ ಪೂಜಾರಿ, ಸತೀಶ ಹೊನ್ನಾಗೊಳ, ಧರೆಪ್ಪ ಗುರುಬಸಪ್ಪಗೋಳ, ಶ್ರೀಶೈಲ ಅಳ್ಳಿಕಟ್ಟಿ, ಲಗಮಣ್ಣ ಗುರುಪಾದಗೋಳ, ಬಸವರಾಜ ಶಿವಾಗೋಳ, ನಾಗೇಶ ಚಂಡಿ, ಅನಿಲ ತಗಲಿ, ಹೊನ್ನಪ್ಪ ಬಗಲಿ, ಅಣ್ಣಪ್ಪ ಕಡೆಮನಿ, ಬಿ.ಎಂ.ಪಟ್ಟಣ, ಶಿವಪ್ಪ ಅಕ್ಕಿಮರಡಿ, ಶಿವಾನಂದ ಕೆಂಪವಾಡೆ, ಅನಿಲಕುಮಾರ ರುದ್ರಗೌಡರ ಇತರರಿದ್ದರು.