ಜಿಲ್ಲೆ

ಗಡಿನಾಡ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ

ಚಾಮರಾಜನಗರ: ತಾಲೂಕು ಪುಣಜನೂರು ಗಡಿಭಾಗದಲ್ಲಿ. ಗಡಿನಾಡು ಕನ್ನಡಿಗರ ಹಿತರಕ್ಷಣಾ ಕ್ರೀಡಾ ಮತ್ತು ಸಂಸ್ಕೃತಿಕ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲಿ ಹಾಕಿರುವ ರಸ್ತೆ ಡುಬ್ಬಗಳಿಗೆ ಸೂಚನಾ ಫಲಕಗಳನ್ನುಅಳವಡಿಸದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿರುವುದನ್ನು ಮನಗಂಡು ರಸ್ತೆ ಡಬ್ಬಗಳಿಗೆ ಬಣ್ಣ ಬಳಿಯುವುದರ ಮೂಲಕ ಜಾಗೃತಿ ಮೂಡಿಸಿದರು.

ಕೊಯಮತೂರಿಗೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಬಾವುಟಗಳಿಂದ, ಹಾರ ತುರಾಯಿಗಳಿಂದ ಸಿಂಗರಿಸಿಕೊಂಡು ಬಂದ ಬಸ್ಸನ್ನು ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿ ವಿತರಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಆರ್. ಸುರೇಶ್, ಉಪಾಧ್ಯಕ್ಷ ಜಾಕಿರ್, ರಂಗಸ್ವಾಮಿ ನಾಯಕ. ಕುಮಾರ್, ಗ್ರಂಥಾಲಯ ಮೇಲ್ವಿಚಾರಕ ವೆಂಕಟೇಶ್ ಪಿ.ಎನ್. ರಂಗಸ್ವಾಮಿ, ರಮೀಜ್, ಮಲ್ಲಣ್ಣ ರಾಜು, ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.