ಜಿಲ್ಲೆ

ಗದಗ: ವಸ್ತು ಪ್ರದರ್ಶನಗಳು ಖರ್ಚುದಾಯಕವೆಂದು ಭಾವಿಸಬಾರದು - ಕೆ.ಎಸ್. ಪವಾರ

ಗಜೇಂದ್ರಗಡ: ಶಾಲೆಗಳಲ್ಲಿ ಹಮ್ಮಿಕೊಳ್ಳುವ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಹೊಸ ವಿಷಯಗಳ ಆವಿಷ್ಕಾರ ಮತ್ತು ಅವಿಷ್ಕಾರಕ್ಕಾಗಿ ಪುಸ್ತಕ ಓದಿಗೆ ಕಾರಣವಾಗುತ್ತವೆ ಹೊರತು ಖರ್ಚುದಾಯಕವೆಂದು ಯಾರೂ ಭಾವಿಸಬಾರದೆಂದು ಜಗದಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಎಸ್.ಪವಾರ ಹೇಳಿದರು.

ಗಜೇಂದ್ರಗಡ ಪಟ್ಟಣದ ಜಗದಂಬಾ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ ಮಂಗಳವಾರ ಜರುಗಿದ ವಿಜ್ಞಾನ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ಜ್ಞಾನವಿಕಾಸಕ್ಕೆ ನಡೆಯುವ ಎಲ್ಲ ಚಟುವಟಿಕೆಗಳಿಗೆ ಪಾಲಕರ ಬೆಂಬಲ ಅವಶ್ಯವಿದ್ದು, ಶಿಕ್ಷಕರು ಮಕ್ಕಳಲ್ಲಿನ ಸೂಪ್ತ ಜ್ಞಾನವನ್ನು ಅರಿತು ಅವರಿಗೆ ಟಾಸ್ಕ್ ಕೊಡಬೇಕು. ಪ್ರಾಯೋಗಿಕ ಕಲಿಕೆಗೆ ಮಕ್ಕಳು ಆಸಕ್ತಿ ಹೊಂದಿರುತ್ತಾರೆ ಎಂದರು.

100 ವಿದ್ಯಾರ್ಥಿಗಳಿಂದ 39 ಪ್ರಯೋಗಗಳು ಜರುಗಿದವು.  ಈ ಸಂಧರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಗುರುನಾಥಸಾ ರಾಯಬಾಗಿ, ಶಾಲೆಯ ಪ್ರಾಚಾರ್ಯ ರಮೇಶ ಕುಷ್ಟಗಿ, ಸಿಆರ್ ಪಿ ಕಳಕೇಶ ವನ್ನಾಲ, ಸುಮಾ ಲಕ್ಕಂಡಿ, ಕೆ.ಎಂ.ಗಾಣಿಗೇರ, ಎಂ.ಡಿ ನಂದಿಹಾಳ, ಅನೀಲ ಮಹೇಂದ್ರಕರ, ಎಸ್.ಐ ಕೌಂಟಿಪಟೇಲ, ಎಸ್.ವಿ ಕಬಾಡಿ, ಎಲ್.ಸಿ.ಶಿಗ್ಲಿ, ವೇದಾ ಶ್ರೀಮಠ, ವಿದ್ಯಾ ಪವಾರ, ಎಚ್.ಎಚ.ಕಂಠಿ, ಎಸ್.ಕೆ.ಚಲವಾದಿ, ಬಿ.ಎಚ್.ಗುಳಗುಳಿ, ರಫಿ ಬಿನ್ನಾಳ, ಎ.ವಿ ಮಿಸ್ಕಿನ, ಜಿ.ಎಂ.ವಾಲಿ ಸೇರಿದಂತೆ ಇತರರು ಇದ್ದರು.