ಜಿಲ್ಲೆ

ಗಚ್ಚಿನಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಇಂದಿನಿಂದ

ಅಥಣಿ: ಪಟ್ಟಣದ ಗಚ್ಚಿನಮಠದ ಆವರಣದಲ್ಲಿ ಫೆ.೨೫ರಿಂದ ೨೭ರ ವರೆಗೆ ಮಹಾಶಿವರಾತ್ರಿ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ತಿಳಿಸಿದರು. ಇಲ್ಲಿನ ಗಚ್ಚಿನಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. ೨೫ರಂದು ಸಂಜೆ ೬.೩೦ಕ್ಕೆ ಶರಣ ಸಂಸ್ಕೃತಿ ಉತ್ಸವ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಚಿತ್ರದುರ್ಗ ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿರ್ಷಾಡದ ಮುರುಘೇಂದ್ರ ಶಿವಾರ್ಚಾಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಬಿದರಿ ಉದ್ಘಾಟಿಸುವರು. ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸುವರು ಎಂದರು.

ಫೆ. ೨೬ರಂದು ಬೆಳಗ್ಗೆ ೭.೩೦ ಗಂಟೆಗೆ ಸಹಜ ಶಿವಯೋಗ, ೯ ಗಂಟೆಗೆ ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ೧೨ ಗಂಟೆಗೆ ಮಹಾಶಿವರಾತ್ರಿಯ ಶಿವಯೋಗ ಮತ್ತು ಮಹಾದಾಸೋಹ ನೆರವೇರಲಿದೆ. ಸಂಜೆ ೬ ಗಂಟೆಗೆ ಬಸವ ತತ್ತ್ವ ಚಿಂತನಗೊಷ್ಠಿ, ರಾತ್ರಿ ೧೦ ಗಂಟೆಗೆ ಶಿವರಾತ್ರಿ ಸಂಗೀತ ಸಂಭ್ರಮ,ಫೆ.೨೭ರಂದು ಬೆಳಗ್ಗೆ ೯ ಗಂಟೆಗೆ ಲಿಂ. ಸಿದ್ದಲಿಂಗ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಅವರ ಭಾವಚಿತ್ರ ಮೆರವಣಿಗೆ ಜರುಗಲಿದೆ ಎಂದು ಮಾಹಿತಿ ನೀಡಿದರು.

ಬ್ಯಾಡಗಿಯ ಮಲ್ಲಿಕಾರ್ಜುನ ಸ್ವಾಮೀಜಿ, ಜಮಖಂಡಿಯ ಆನಂದ ದೇವರು, ರಾಜು ಬಿಳ್ಳೂರ, ಹಣಮಂತ ಕಾಲುವೆ,ಗಿರೀಶ ದಿವಾನಮಳ,ರಾಜು ಬಿಳ್ಳೂರ, ಶ್ರೀಶೈಲ ಹಳ್ಳದಮಳ, ಮಹಾಂತೇಶ ಮಾಳಿ, ರಾಮನಗೌಡ ಪಾಟೀಲ, ನಿತ್ಯಾನಂದ ಚರಂತಿಮಠ, ವಿಜಯ ನೇಮಗೌಡ, ಸಂತೋಷ ದಿವಾನಮಳ ಇದ್ದರು.