ಯಾದಗಿರಿ: ತನ್ನ ಗಂಡನ ಆತ್ಮಹತ್ಯೆಗೆ ಕಾರಣರಾದ ಐವರನ್ನೂ ಕೂಡಲೇ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತನ ಹೆಂಡತಿ ಸಕ್ರಿಬಾಯಿ ಧನ್ನು ಚವ್ಹಾಣ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿz್ದÁರೆ.
ತಾಲೂಕಿನ ಹೊರುಂಚ ನಡುವಿನ ತಾಂಡಾದ ನಿವಾಸಿ ಧನ್ನು ಚವ್ಹಾಣ್ (೪೦) ಎಂಬುವವರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಸಾವಿಗೆ ಸೋನಿಬಾಯಿ ಚವ್ಹಾಣ್ ಮತ್ತು ಕಾಂತಿಲಾಲï ಧಂಜು ಚವ್ಹಾಣ್, ತಾರಿಬಾಯಿ ರಾಠೋಡ್, ದೇವಿಬಾಯಿ ಶಿವ ರಾಠೋಡ್ ಮತ್ತು ಸುನೀತಾಬಾಯಿ ಎಂಬುವವರೇ ಕಾರಣರಾಗಿದ್ದು ಕೂಡಲೇ ಅವರನ್ನು ಬಂಧಿಸುವAತೆ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ವಿವರ: ನಾಲ್ಕು ಮಕ್ಕಳ ತಂದೆ ಆಗಿರುವ ಮೃತ ಧನ್ನು, ಈಗ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಸೋನಿಬಾಯಿಗೂ ಸಂಬAಧವಿತ್ತು. ಅವಳು ಕಳೆದ ಹತ್ತು ವರ್ಷದಿಂದ ನಮ್ಮ ಮನೆಯಲ್ಲಿಯೆ ಇರುತ್ತಿದ್ದಳು. ಆಗಾಗ ತನ್ನ ಗಂಡನ ಜತೆ ಜಗಳವಾಡುತ್ತಿದ್ದಳು. ಹೀಗೆ ಜಗಳವಾಡಿ ತನ್ನ ತವರು ಮನೆಗೆ ಹೋದ ಅವಳನ್ನು ಕರೆಯಲು ಹೋದ ಗಂಡನನ್ನು ಈ ಎಲ್ಲರೂ ಬಾಯಿಗೆ ಬಂದAತೆ ಬೈದು ಕಳುಹಿಸಿz್ದÁರೆ. ಆದರೂ ಮತ್ತೆ ಅಲ್ಲಿಗೆ ಕರೆಯಲು ಹೋದಾಗ ಆಕೆಯ ಮನೆ ಮುಂದಿನ ಬೇವಿನ ಮರಕ್ಕೆ ನೇಣು ಬೀಗಿದ ಸ್ಥಿತಿಯಲ್ಲಿ ನನ್ನ ಗಂಡ ಇದ್ದದನ್ನು ನೋಡಿದವರು ಹೇಳಿದ್ದರಿಂದ ಈ ಸಾವಿಗೆ ಅವರೇ ನೇರ ಕಾರಣರಾಗಿದ್ದು, ಹೀಗಾಗಿ ಕೂಡಲೇ ಅವರನ್ನು ಬಂಧಿಸುವAತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು, ಸೋನುಬಾಯಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಜಾಲ ಬೀಸಲಾಗಿದೆ.