ಜಿಲ್ಲೆ

ಗಂಡ ಹೆಂಡತಿ ಜಗಳ,ಸಾವು

ಚಿತ್ರದುರ್ಗ:ಗಂಡ-ಹೆಂಡತಿ ನಡುವಿನ ಜಗಳ ಗಂಡನ ಸಾವಿನಲ್ಲಿ ಮುಕ್ತಾಯಗೊಂಡಿರುವ ಘಟನೆ ಚಳ್ಳಕೆರೆ ತಾಲೂಕು ಕಾಲುವೆಹಳ್ಳಿಯಲ್ಲಿ ಭಾ ನುವಾರ ನಡೆದಿದೆ. ಮೃತನನ್ನು ಮಹಾರಾಷ್ಟ್ರದ ರೋಹ ತಾಲೂಕಿನ ಹರಿಶ್ಚಂದ್ರ(50) ಎಂಬ ಇದ್ದಿಲು ಸುಡುವ ಕಾರ್ಮಿಕ ಎಂದು ಗುರುತಿಸ ಲಾಗಿದೆ.
ಹೆಂಡತಿ ಯಶೋದ ಹಾಗೂ ಹರಿಶ್ಚಂದ್ರನ ನಡುವೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತಿರುಗಿದ್ದು,ಪರಸ್ಪರ ಮಾಡಿಕೊಂಡ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹರಿಶ್ಚಂದ್ರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಯೋಶೋದಾ ಕೂಡ ಗಾಯಗೊಂಡಿ ದ್ದು,ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.