ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಬೊಮ್ಮೇನಹಳ್ಳಿಯಲ್ಲಿ ಈಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗಂ ಗೋತ್ರಿ ಜ್ಞಾನವಿಕಾಸ ಕೇಂದ್ರವನ್ನು ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್‌ಪೂಜಾರಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಹೇಮಾವತಿ ಹೆಗ್ಗಡೆ ಅವರು ಜ್ಞಾನಿವಿಕಾಸ ಕೇಂದ್ರ ಆರಂಭಿಸಿದ್ದಾರೆ. ಗ್ರಾಮೀಣ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ,ಆರೋಗ್ಯ ಶಿಕ್ಷ ಣಾಧಿಕಾರಿ ಮೂಗಪ್ಪ,ಪಿಡಿಒ ಇರ್ಫಾನುಲ್ಲಾ,ಸುಮಾ,ಸಂತೋಷ್,ಶಿವಲೀಲಾ ಎಸ್.ಬಾಗೋಡಿ,ನಂದಿನಿ,ಶೀಲಾ,ಲಾವಣ್ಯ ಇತರರು ಇದ್ದರು.