ಜಿಲ್ಲೆ

ಖೋ ಖೋದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ಕುರುಗೋಡು: ಕಲ್ಲುಕಂಬ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ಕಲಬುರಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ.

ಬಳ್ಳಾರಿಯ ಸೇಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಖೋ ಖೋ ಆಟದಲ್ಲಿ ಬಾಲಕಿಯರ ವಿಭಾಗದಲ್ಲಿ ನಡುವಿ ತಂಡದ ವಿರುದ್ಧ ಹಾಗೂ ಬಾಲಕರ ವಿಭಾಗದಲ್ಲಿ ಅಚ್ಚಳ್ಳಿ ತಂಡದ ವಿರುದ್ಧ ಕಲ್ಲುಕಂಬ ಶಾಲೆ ವಿದ್ಯಾರ್ಥಿಗಳು ಜಯ ಸಾಧಿಸಿದ್ದಾರೆ.

ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸುವುದು ಶಿಕ್ಷಕರ ಕರ್ತವ್ಯ. ಪಠ್ಯದ ಜತೆಗೆ ಕ್ರೀಡೆ ಬಗ್ಗೆಯೂ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಿದರೆ, ರಾಜ್ಯ, ದೇಶದ ಪರವಾಗಿ ಆಟೋಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಎನ್.ದೊಡ್ಡಪ್ಪ ತಿಳಿಸಿದರು.