ಬಾಗಲಕೋಟೆ ನಗರದಲ್ಲಿ ರಾಷ್ಟಿçÃಯ ವುಶು ಚಾಂಪಿಯನ್ ಶಿ-Àನಲ್ಲಿ ಪದಕ ಪಡೆದ ರಾಜ್ಯ ಕ್ರೀಡಾಪಟುಗಳ ಸನ್ಮಾನಿಸಲಾಯಿತು. ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಉಪಾಧ್ಯಕ್ಷ ಅಶೋಕ ಸಜ್ಜನ ಬೆವೂರ, ಡಾ.ರಾಜಶೇಖರ ಹಿರೇಮಠ, ವಾಣಿಶ್ರೀ, ಎ.ಎಂ.ರಾಜ್ಯ ವುಶು ಸಂಸ್ಥೆಯ ಖಜಾಂಚಿ ಸಂಗಮೇಶ ಲಾಯದಗುಂದಿ, ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ ಇದ್ದರು. 
ಜಿಲ್ಲೆ

ಖೇಲೋ ಇಂಡಿಯಾ ಅಸ್ಮೀತಾ ವುಶು ಲೀಗ್ ಬಾಗಲಕೋಟೆಯಲ್ಲಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ವುಶು ಕ್ರೀಡೆಯಲ್ಲಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಉತ್ತಮ ಕ್ರೀಡಾಪಟುಗಳಿದ್ದು ಖೇಲೋ ಇಂಡಿಯಾ ಅಸ್ಮೀತಾ ವುಶು ಲೀಗ್ ಕ್ರೀಡಾಕೂಟ ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಮೇಡಿಕಲ್ ಕಾಲೇಜಿನ ಆವರಣದಲ್ಲಿ ಶನಿವಾರ ರಾಷ್ಟಿçÃಯ ವುಶು ಚಾಂಪಿಯನ್ ಶಿ-ï‌ನಲ್ಲಿ ಪದಕ ಪಡೆದ ರಾಜ್ಯದ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೇ ೨೬ ರಿಂದ ಮೇ ೩೧ ರವರೆಗ ತಮಿಳನಾಡಿನಲ್ಲಿ ನಡೆದ ೨೫ನೇ ರಾಷ್ಟಿçÃಯ ಸಹ ಜೂನಿಯರ ವುಶು ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಪದಕಗಳನ್ನು ಪಡೆದುಕೊಂಡಿದ್ದು ಶ್ಲಾಘನೀಯ. ಬಾಗಲಕೋಟೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಕ್ರೀಡಾ ಸಾಧಕರಿರುವದರಿಂದ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಖೇಲೋ ಇಂಡಿಯಾ ಅಸ್ಮೀತಾ ವುಶು ಲೀಗ್ ಕ್ರೀಡಾಕೂಟಟ ಬಾಗಲಕೋಟೆಯಲ್ಲಿ ಅಯೋಜಿಸುವ ಯೋಜನೆ ಈಗಾಗಲೆ ರೂಪಿಸಲಾಗಿದೆ ಎಂದರು.

ಕ್ರೀಡಾಪಟುಗಳ ಸಾಧನೆ ವಿವರ: ಮೇ ೨೬ ರಿಂದ ೩೧ ವರೆಗೆ ೨೫ ನೇ ರಾಷ್ಟಿçÃಯ ಸಹ ಜೂನಿಯರ ವುಶು ಚಾಂಪಿಯನ್‌ಶಿಪ್‌ನಲ್ಲಿ ಕುಮಾರಿ ಪ್ರಣತಿ ಜಿ, ಸಾನ್ವಿ ಶೆಟ್ಟಿ, ನೈನಾ ಜೈನ್ ಬೆಳ್ಳಿಯ ಪದಕ ಹಾಗೂ ಸಾನ್ವಿ ನೇಟಿಕಟ್ಟಿ, ಪಿ.ಸಾನ್ವಿ, ಅನ್ನಪೂರ್ಣೇಶ್ವರಿ, ಸಾನ್ವಿ ಪಿ, ದೃವಿನ ಕುಮಾರ ಅಬುಬಕರ್ ಹಾಗೂ ಸಾನಿಯಾ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಜೂ.೧೪ ರಿಂದ ೧೯ ರ ವರೆಗೆ ಪೂರ್ಣಿಮಾ ವಿಶ್ವ ವಿದ್ಯಾಲಯದಯ ಜೈಪುರ ರಾಜಸ್ಥಾನದಲ್ಲಿ ನಡೆದ ೩೪ ನೇ ರಾಷ್ಟಿçÃಯ ಸೀನಿಯರ ವುಶು ಚಾಂಪಿಯನ್ ಶಿ-Àನಲ್ಲಿ ರಾಜ್ಯದ ವಿನೋದಕುಮಾರ ೭೫ ಕೆಜಿ ಸಾಚಿಡಾ ವಿಭಾಗದಲ್ಲಿ ಬೆಳ್ಳಿಯ ಪದಕ ಹಾಗೂ ಅನಿತಾ ಚವ್ಹಾಣ ತಾವಲು ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ರಾಜ್ಯ ವುಶು ಸಂಸ್ಥೆಯ ಉಪಾಧ್ಯಕ್ಷ ಅಶೋಕ ಸಜ್ಜನ ಬೆವೂರ, ಡಾ.ರಾಜಶೇಖರ ಹಿರೇಮಠ, ವಾಣಿಶ್ರೀ, ಎ.ಎಂ.ರಾಜ್ಯ ವುಶು ಸಂಸ್ಥೆಯ ಖಜಾಂಚಿ ಸಂಗಮೇಶ ಲಾಯದಗುಂದಿ, ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ ಇದ್ದರು.