ಜಿಲ್ಲೆ

ಖೂಬಾ-ಸಲಗರ ಕದನ ವಿರಾಮಕ್ಕೆ ಕ್ರಮ

ಮಾರ್ಥಂಡ ಜೋಶಿ ಬಸವಕಲ್ಯಾಣ
ಸ್ಥಳೀಯ ಸಂಸದರಾದ ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮತ್ತು ಬಿಜೆಪಿ ಶಾಸಕ ಶರಣು ಸಲಗರ ನಡುವಿನ ಕಲಹದಿಂದ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ಗೆ ವರಿಷ್ಠರು ಮುಂದಾಗಿದ್ದಾರೆ. ಇಬ್ಬರೂ ಭಿನ್ನಾಭಿಪ್ರಾಯ ಬಿಟ್ಟು ಒಂದಾಗಬೇಕು. ತಕ್ಷಣ ಆಂತರಿಕ ಕಲಹಕ್ಕೆ ಬ್ರೇಕ್ ಹಾಕದಿದ್ದರೆ ಶಿಸ್ತಿನ ಕ್ರಮದ ವಾನರ್ಿಂಗ್ ನೀಡಿದ್ದಾರೆ ಎಂದು ಗೊತ್ತಾಗಿದೆ.

ಇಬ್ಬರ ಬೆಂಬಲಿಗರ ಮಧ್ಯೆ ನಡೆದ ಬೀದಿ ಜಗಳ, ನಂತರ ಅಧಿಕಾರಿಗಳ ವಗರ್ಾವಣೆ ಸಂಷರ್ಘ ಬೆಳವಣಿಗೆ ಸ್ವಪಕ್ಷೀಯರ ನಡುವಿನ ಕದನದ ಕಾವು ಹೆಚ್ಚಿಸಿತ್ತು. ಇದು ಪಕ್ಷಕ್ಕೆ ಮುಜುಗುರ ತರುವ ವಾತಾವರಣ ಸೃಷ್ಟಿಸಿದೆ. ಈ ರಂಪಾಟ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ಕಾರಣ ವರಿಷ್ಠರು ವಿಷಯ ಗಂಭೀರ ಪರಿಗಣಿಸಿ, ಕಲಹಕ್ಕೆ ಬ್ರೇಕ್ ಹಾಕುವುದಕ್ಕೆ ಮುಂದಾಗಿದ್ದಾರೆ.

ತಹಸೀಲ್ದಾರ್ ಸಾವಿತ್ರಿ ಸಲಗರ ವಗರ್ಾವಣೆ ವಿಷಯ ಸಚಿವ, ಶಾಸಕರ ನಡುವೆ ಮೈ ಬಡಾ-ತು ಬಡಾ ಕಚ್ಚಾಟ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಲ್ಲ ಎಂಬುದು ಸ್ಪಷ್ಟ ಸಂದೇಶ ರವಾನಿಸಿದೆ. ಜವಾಬ್ದಾರಿ ಸ್ಥಾನದಲ್ಲಿರುವವರ ಒಣ ಪ್ರತಿಷ್ಠೆಯ ಸಮರ ಪಕ್ಷಕ್ಕೆ ಡ್ಯಾಮೇಜ್ ತರುತ್ತಿರುವ ಕಾರಣ ರಾಜ್ಯ ನಾಯಕರು ಮಧ್ಯೆ ಪ್ರವೇಶಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಅವರು ಕದನ ವಿರಾಮಕ್ಕೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಇದರ ಭಾಗವಾಗಿ ಶಾಸಕ ಸಲಗರ ಅವರು ಸಚಿವ ಖೂಬಾ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಸಕ ಸಲಗರ ಅವರು ದಿಲ್ಲಿಯಲ್ಲಿ ಸಚಿವ ಖೂಬಾ ಅವರ ನಿವಾಸಕ್ಕೆ ತೆರಳಿ ಒಂದು ಗಂಟೆ ಚಚರ್ಿಸಿದ್ದಾರೆ. ಈ ವೇಳೆ ಏನು ಚಚರ್ೆ ನಡೆದಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಪಕ್ಷದ ಹಿತದಿಂದ ಒಟ್ಟಾಗಿ ಹೋಗೋಣ ಎಂಬ ಮಾತುಕತೆ ನಡೆದಿರುವ ಬಗ್ಗೆ ಗೊತ್ತಾಗಿದೆ. ಆಜಾದಿ ಅಮೃತ ಮಹೋತ್ಸವ ಕಾರ್ಯಕ್ರಮದ ಕಾರ್ ರ್ಯಾಲಿ ವೇಳೆ 13ರಂದು ಬಸವಕಲ್ಯಾಣದಲ್ಲಿ ಕಾರ್ಯಕರ್ತರಿಂದ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಲಗರ ಕ್ಷಮೆ ಕೋರಿದ್ದಾರೆ ಎನ್ನಲಾಗುತ್ತಿದೆ.

ಸದ್ಯದ ಮಟ್ಟಿಗೆ ಇಬ್ಬರ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಒಂದು ಹಂತದಲ್ಲಿ ಬಗೆಹರಿದಂತೆ ಕಾಣುತ್ತಿವೆ. ಆದರೆ ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆಯುವುದೋ ತಿಳಿಯದು. ಏಕೆಂದರೆ ಔರಾದ್ ಶಾಸಕರಾದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮತ್ತು ಕೇಂದ್ರ ಸಚಿವ ಖೂಬಾ ನಡುವಿನ ಆಂತರಿಕ ಕಲಹ ಕಳೆದ ಮೂರ್ನಾಲ್ಕು ವರ್ಷದಿಂದ ಹಾಗೆಯೇ ಮುಂದುವರಿದಿದೆ. ತಣ್ಣಗಾಗಿದೆ ಎನ್ನುವಷ್ಟರಲ್ಲಿ ಮತ್ತೆ ಭುಗಿಲೇಳುತ್ತಲೇ ಸಾಗಿದೆ. ಈ ಲೆಕ್ಕಾಚಾರ ಗಮನಿಸಿದರೆ ಬಸವಕಲ್ಯಾಣ ಕಚ್ಚಾಟಕ್ಕೆ ಬ್ರೇಕ್ ಬೀಳುವುದು ಅನುಮಾನ ಎನಿಸಿದೆ.

ಮನೆಯೊಂದು ಮೂರು ಬಾಗಿಲು!: ಜಿಲ್ಲಾ ಬಿಜೆಪಿ ಸದ್ಯಕ್ಕೆ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಪ್ರಮುಖ ನಾಯಕರ ನಡುವೆ ಹೊಂದಾಣಿಕೆಯೇ ಇಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಪಕ್ಷದೊಳಗಡೆಯೇ `ದೋ ಪಾಟರ್ಿ' ಆಗಿವೆ. ಇದು ಚುನಾವಣೆ ಎದುರಾದ ಸಂದರ್ಭದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಗೊಂದಲ, ತಳಮಳಕ್ಕೆ ಕಾರಣವಾಗಿದೆ. ಭಗವಂತ ಖೂಬಾ ಕೇಂದ್ರ ಸಚಿವರಾದ ಬಳಿಕ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಬಲವಾಗಬೇಕಿತ್ತು. ಆದರೆ ಇದರ ಬದಲಾಗಿ ಆಂತರಿಕ ಕಚ್ಚಾಟವೇ ಹೆಚ್ಚಾಗಿದೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸಾಮಾನ್ಯವಾಗಿದೆ. ಪಕ್ಷದ ಮೂವರು ಪ್ರಮುಖ ಜನಪ್ರತಿನಿಧಿಗಳಲ್ಲಿ(ಒಬ್ಬರು ಸಂಸದರು, ಇಬ್ಬರು ಶಾಸಕರು) ಸಮನ್ವಯತೆಯೇ ಇಲ್ಲ. ಔರಾದ್ ಬಳಿಕ ಈಗ ಬಸವಕಲ್ಯಾಣ ಕ್ಷೇತ್ರದಲ್ಲಿ ಒಳಜಗಳ ಬೀದಿಗೆ ಬಂದಿದೆ. ಇದು ಬಿಜೆಪಿಯೊಳಗಿನ ದುಸ್ಥಿತಿ ಸಾಬೀತುಪಡಿಸಿದೆ. ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕುಸ್ತಿ ನೋಡಿದರೆ ಬರುವ ಚುನಾವಣೆಯಲ್ಲಿ ದೊಡ್ಡ ಬೆಲೆ ತೆತ್ತುವ ಲಕ್ಷಣ ಗೋಚರಿಸುತ್ತಿವೆ.

ತಹಸೀಲ್ದಾರ್ ವಗರ್ಾವಣೆ ಆಗಲಿದೆ: ತಹಸೀಲ್ದಾರ್ ಸಾವಿತ್ರಿ ಸಲಗರ ಅವರು ಕಳೆದ ಮೂರೂವರೆ ವರ್ಷಗಳಿಂದ ಬಸವಕಲ್ಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೋಮವಾರ ಅವರ ವಗರ್ಾವಣೆ ಮಾಡಿ ಹೊರಡಿಸಿದ ಆದೇಶಕ್ಕೆ ಮಂಗಳವಾರ ತಡೆ ನೀಡಿ ಸಕರ್ಾರ ಮತ್ತೊಂದು ಆದೇಶ ಹೊರಡಿಸಿತ್ತು. ಇದು ಸಹ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ತಹಸೀಲ್ದಾರ್ ವಗರ್ಾವಣೆ ಆಗಲಿದೆ. ಅವಧಿ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಇಲ್ಲಿಂದ ಬೇರೆ ಕಡೆ ವಗರ್ಾವಣೆ ಮಾಡಲಾಗುತ್ತಿದೆ. ಈ ಕುರಿತು ಈಗಾಗಲೇ ಶಿಫಾರಸು ಪತ್ರವೂ ನೀಡಲಾಗಿದೆ ಎಂದು ತಹಸೀಲ್ದಾರ್ ಸಾವಿತ್ರಿಯ ಪತಿಯೂ ಆಗಿರುವ ಶಾಸಕ ಶರಣು ಸಲಗರ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಭಗವಂತ ಖೂಬಾ ಅವರು ಹಿರಿಯರು. ಅವರನ್ನು ಮಂಗಳವಾರ ಭೇಟಿ ಮಾಡಿದ್ದು, ಸುದೀರ್ಘ ಸಮಾಲೋಚನೆ ಮಾಡಿದ್ದೇವೆೆ. ಬಸವಕಲ್ಯಾಣದಲ್ಲಿ ಕಳೆದ 13 ರಂದು ಕಾರ್ಯಕರ್ತರಿಂದ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದೇನೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಇಬ್ಬರೂ ಮೊದಲಿನಂತೆ ಅನ್ಯೋನತೆಯಿಂದ ಇರುತ್ತೇವೆ.
| ಶರಣು ಸಲಗರ, ಶಾಸಕ