ಜಿಲ್ಲೆ

ಖಿಳೇಗಾಂವ ಬಸವೇಶ್ವರ ಜಾತ್ರೋತ್ಸವ ಅದ್ದೂರಿ

ಸಂಬರಗಿ: ಸಮೀಪದ ಖಿಳೇಗಾಂವ ಬಸವೇಶ್ವರ ದೇವರ ಜಾತ್ರೆ ಆರಂಭವಾಗಿದ್ದು, ಬಸವೇಶ್ವರ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಬರಮಾಡಿಕೊಳ್ಳಲಾಯಿತು. ಭಾನುವಾರ ಭಕ್ತರು ಗ್ರಾಮದಲ್ಲಿ ಪಲ್ಲಕ್ಕಿಗೆ ಸಕ್ಕರೆ ನೈವೇದ್ಯ ಅರ್ಪಿಸಿದರು.

ಬಿಸಿಲಿನ ನಡುವೆಯೂ ನೂರಾರು ಭಕ್ತರು ದೇವರ ದರ್ಶನ ಪಡೆದರು. ಮಹಿಳೆಯರು ಕುಂಭ ಹೊತ್ತರು. ಕಲಾವಿದರು ವಿವಿಧ ಸಂಗೀತ ವಾದ್ಯ ನುಡಿಸಿದರು. ರಾತ್ರಿ ಪಲ್ಲಕ್ಕಿಯು ದೇವಸ್ಥಾನಕ್ಕೆ ಮರಳಿತು. ಮಹಾರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು.

ಬಸವೇಶ್ವರ ದೇವಸ್ಥಾನ ಟ್ರಸ್ಟ್ನಿಂದ ಭಕ್ತರಿಗೆ ವಸತಿ, ನೀರು ಮತ್ತು ಬೆಳಕಿನ ಸೌಲಭ್ಯ ಒದಗಿಸಲಾಗಿದೆ. ವಿವಿಧೆಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.