ಜಿಲ್ಲೆ

ಖಾಸಗಿ ಶಾಲೆಗಳಿಗೆ ಬೇಕು ಸಹಕಾರ

ಚಳ್ಳಕೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಸದಸ್ಯರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.

ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣವನ್ನು 10 ವರ್ಷದವರೆಗೆ ಅನುಷ್ಠಾನ ಮಾಡಬೇಕು. ಕಟ್ಟಡ ಮತ್ತು ಅಗ್ನಿ ಸುರಕ್ಷತೆ ಬಗ್ಗೆ ನ್ಯಾಯಾಲಯದ ಆದೇಶದಂತೆ ಅನುಕೂಲ ಕಲ್ಪಿಸಬೇಕು. ಸಮಾಜದಲ್ಲಿನ ಶಿಕ್ಷಣ ಪ್ರಗತಿಗೆ ದುಡಿಯುತ್ತಿರುವ ಖಾಸಗಿ ಶಾಲೆಗಳ ನಿರ್ವಹಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರ ಇರಬೇಕು ಎಂದು ಮನವಿ ಮಾಡಿದರು.

ಮಂಡಳಿಗಳ ಟ್ರಸ್ಟ್ ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ, ಕಾರ್ಯದರ್ಶಿ ಪಿ. ದಯಾನಂದ, ಜಿ.ಟಿ. ವೀರಭದ್ರನಾಯಕ, ಕೆ.ಪಿ. ತಿಪ್ಪೇಸ್ವಾಮಿ, ದೊಡ್ಡ ಉಳ್ಳಾರ್ತಿ ಗೌರೀಶ, ಬಿ. ಸುರೇಶ, ಶ್ರೀನಿವಾಸ ಮತ್ತಿತರರು ಇದ್ದರು.