ಜಿಲ್ಲೆ

ಖಾಸಗಿ ಬಸ್ ಪಲ್ಟಿ, 6 ಮಂದಿಗೆ ಗಾಯ

ಬೀದರ್: ಬೆಂಗಳೂರಿನಿಂದ ಬೀದರ್​ಗೆ ಬರುತ್ತಿದ್ದ ಖಾಸಗಿ ಟ್ರಾವೆಲ್ಸ್ (ಬಸ್) ಪಲ್ಟಿಯಾಗಿ 6 ಮಂದಿಗೆ ಗಂಭೀರ ಗಾಯಗಳಾದ ಘಟನೆ ಆಣದೂರ ವಾಡಿ ಕ್ರಾಸ್ ಸಮೀಪ ಶನಿವಾರ ನಡೆದಿದೆ. ಮುಧೋಳ ಗ್ರಾಮದ ದಂಪತಿ ಗಿರೀಶ್ (49), ಶೋಭಾವತಿ (45), ಬೆಂಗಳೂರಿನ ಸುಮನ್ (66), ಕಲಬುರಗಿ ಜಿಲ್ಲೆಯ ಕೆಲ್ಲೂರ್ ಗ್ರಾಮದ ಬಸಯ್ಯ ಸ್ವಾಮಿ (32), ಇಲ್ಲಿಯ ಕಾನನ್ ಕಾಲನಿ ನಿವಾಸಿ ಸುನೀತಾ (39) ಹಾಗೂ ಬಸ್ ಚಾಲಕ ಶಹಾಬಾದ್ ನಿವಾಸಿ ಗೋಪಾಲ (36) ಗಂಭೀರ ಗಾಯಗೊಂಡಿದ್ದು, ಬ್ರಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.