ಜಿಲ್ಲೆ

ಖಾಸಗಿ, ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಶೈಕ್ಷಣಿಕ ಪ್ರವಾಸ ಹೊರಟಿದ್ದ ಮಕ್ಕಳಿಗೆ ಗಾಯ

ಆನಂದಪುರ: ಹೊಸೂರಿನ ನಂದಿಹೊಳೆ ಸೇತುವೆ ಸಮೀಪ ಚೆನ್ನಶಟ್ಟಿಕೊಪ್ಪ ಗ್ರಾಮ ಸಂಪರ್ಕ ರಸ್ತೆ ತಿರುವಿನ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಗುರುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಶಾಲಾ ಮಕ್ಕಳ ಪ್ರವಾಸದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿವೆ.

ಸಾಗರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೆಂಗಳೂರಿನಿಂದ ಜೋಗ ಇತ್ಯಾದಿ ಪ್ರವಾಸಿ ಸ್ಥಳ ವೀಕ್ಷಣೆಗೆ ಬರುತ್ತಿದ್ದ ಶಾಲಾ ವಿದ್ಯಾರ್ಥಿಗಳು ಇರುವ ಖಾಸಗಿ ಬಸ್ ಮುಖಾಮುಖಿಯಾಗಿದೆ. ಅಪಘಾತದಲ್ಲಿ ಪ್ರವಾಸಕ್ಕಾಗಿ ಬಂದ ಕೆಲವು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು ಪ್ರಾಥಮಿಕ ಚಿಕಿತ್ಸೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಎಲ್ಲರೂ ಆಪಾಯದಿಂದ ಪಾರಾಗಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ.