ಸಿಪಿಐ(ಎಂ) ಸ್ಥಳೀಯ ಸಮಿತಿ ಕಾರ್ಯದರ್ಶಿ ಎಚ್.ಆರ್. ನವೀನ್‌ಕುಮಾರ್, ಎಂ.ಜಿ. ಪೃಥ್ವಿ, ರಾಜು ಸಿಗರನಹಳ್ಳಿ, ವಾಸು, ಜಿ.ಪಿ. ಸತ್ಯನಾರಾಯಣ, ಅರವಿಂದ, ವಸಂತಕುಮಾರ್, ಮೋಹನ್, ಪ್ರಸನ್ನಕುಮಾರ್ ಇದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕರೊನಾ ನಿಯಂತ್ರಣಕ್ಕಾಗಿ ತಿಂಗಳುಗಟ್ಟಲೇ ಲಾಕ್‌ಡೌನ್ ಘೋಷಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆರ್ಥಿಕ ಚಟುವಟಿಕೆ ಸಂಪೂರ್ಣ ಕುಸಿದು ಬಡವರು ಬದುಕಲು ಕಷ್ಟವಾಗುತ್ತಿದೆ. ಕೆಲಸವಿಲ್ಲದೆ, ಸರಿಯಾಗಿ ಕೂಲಿ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಆದರೆ, ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಕೋವಿಡ್-19ನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿ ಸಿಪಿಐ(ಎಂ) ಕಾರ್ಯಕರ್ತರು ನಗರದ ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರದ ವಿರುದ್ಧ ಸಿಪಿಐ ಆಕ್ರೋಶ:
ಕರೊನಾ ಮಹಾಮಾರಿ ನಡುವೆಯೂ ಪದೇ ಪದೆ ಕಾಲೇಜಿಗೆ ಬರುವಂತೆ ಮಾಡುತ್ತಿದ್ದಾರೆ. ಉತ್ತಮ ಪಾಠ ಮಾಡಿದ ಉಪನ್ಯಾಸಕರಿಗೆ ತಿಂಗಳುಗಟ್ಟಲೇ ಸಂಬಳ ನೀಡದೆ ಅವರು ಕಾಲೇಜು ಬಿಡುವಂತೆ ಮಾಡಿದ್ದಾರೆ. ಇಂತಹ ಸಂಸ್ಥೆಯಲ್ಲಿ ನಾವು ಶಿಕ್ಷಣ ಮುಂದು ವರಿಸುವುದಿಲ್ಲ ಎಂದು ಪಟ್ಟು ಹಿಡಿದರು. ಕೆಲ ಹೊತ್ತಿನ ಬಳಿಕ ಆಡಳಿತಾಧಿಕಾರಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಮುಷ್ಕರ ವಾಪಸ್ ಪಡೆಯಲಾಯಿತು.
ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷೃದಿಂದ ನಮ್ಮ ಶೈಕ್ಷಣಿಕ ಬದುಕು ಹಾಳಾಗುತ್ತಿದೆ. ಪ್ರಥಮ ಪಿಯುಸಿಗೆ ಪಾಠ ಮಾಡಿದ ಅನೇಕ ಉಪನ್ಯಾಸಕರು ಬೇರೆ ಕಾಲೇಜಿಗೆ ಸೇರಿದ್ದಾರೆ. ದ್ವಿತೀಯ ಪಿಯುಸಿ ಜೀವನದ ಮಹತ್ತರ ಘಟ್ಟವಾಗಿದ್ದು, ಉತ್ತಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಬೇಕೆಂಬುದು ನಮ್ಮ ಆಸೆ. ಆದರೆ, ಅದಕ್ಕೆ ಕಾಲೇಜಿನವರು ಸಹಕರಿಸುತ್ತಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅಗತ್ಯ ದಾಖಲಾತಿ ನೀಡಿದರೂ ವರ್ಗಾವಣೆ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದರು.
ದ್ವಿತೀಯ ಪಿಯುಸಿ ವ್ಯಾಸಂಗಕ್ಕೆ ಬೇರೆ ಕಾಲೇಜಿಗೆ ತೆರಳುತ್ತಿರುವ ನಮಗೆ ವರ್ಗಾವಣೆ ಪತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿ ಹಾಗೂ ಪಾಲಕರು ನಗರದ ಖಾಸಗಿ ಕಾಲೇಜಿನ ಎದುರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ವಿಜಯವಾಣಿ ಸುದ್ದಿಜಾಲ ಹಾಸನ