ಬೀದರ್: ಸ್ಮಾಟ್೯ ಕ್ಲಾಸ್ ಮತ್ತು ಸೈನ್ಸ್ ಥೀಮ್ ಪಾಕ್೯ ನಿರ್ಮಾಣ ವಿಚಾರವಾಗಿ ಶಾಸಕ ಬಂಡೆಪ್ಪ ಖಾಶೆಂಪುರ ತಾಲೂಕಿನ ಖಾಶೆಂಪುರ(ಪಿ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸೈನ್ಸ್ ಥೀಮ್ ಪಾಕ್೯ ನಿರ್ಮಾಣ ಸ್ಥಳ ವೀಕ್ಷಣೆ ನಡೆಸಿದ ಅವರು, ಸ್ಮಾಟ್೯ ಕ್ಲಾಸ್ ಗಳಿಗೆ ಸಂಬಂಧಿಸಿದ ಡೆಮೋ ಕ್ಲಾಸ್ ಗೆ ಚಾಲನೆ ನೀಡಿದರು. ಇದೇ ವೇಳೆ ಸೈನ್ಸ್ ಥೀಮ್ ಪಾಕ್೯ ಗೆ ಸಂಬಂಧಿಸಿದ ಕನ್ಸಲ್ಟೆಂಟ್ ಗಳಾದ ಕೃಷ್ಣ ಕೆ.ಆರ್., ಬಿ.ಕುಲಕರ್ಣಿ, ನಿರ್ಮಿತಿ ಕೇಂದ್ರದ ಅಧಿಕಾರಿ ಮಠಪತಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಾನಾ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಮುಖಂಡರಾದ ಶರಣಪ್ಪ ಖಾಶೆಂಪುರ, ರವೀಂದ್ರ ಗುಮಾಸ್ತಿ, ಸೂರ್ಯಕಾಂತ, ಅಜಿತ್ ಸಾಗರ, ಶಿವಕುಮಾರ ಬಾಲೇಬಾಯಿ, ಮಂಜುನಾಥ ಬಾಲೇಬಾಯಿ, ಶಾಮಣ್ಣ ಬಾಲೇಬಾಯಿ, ಶಿಕ್ಷಕರಾದ ಗಂಗಾಧರ, ಅಶೋಕ ಇತರರಿದ್ದರು.