ವಿವಿಧ ಬೇಡಿಕೆ ಈಡೇರಿಸುವಂತೆ ಪೌರ ನೌಕರರ ಸಂಘದ ತಾಲೂಕು ಶಾಖೆಯಿಂದ ಬಸವಕಲ್ಯಾಣದಲ್ಲಿ ಶಾಸಕ ಶರಣು ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪೌರಾಯುಕ್ತ ರಾಜು ಬಣಕಾರ, ಸಂಘದ ತಾಲೂಕಾಧ್ಯಕ್ಷ ಸೂರ್ಯಕಾಂತ ಶಾಖಾ, ಶ್ರೀದೇವಿ ಸುಭಾಷ, ಮಹ್ಮದ್ ಅಲೀಮ್, ಸುರೇಶ ಮುಜನಾಯಕ್, ಕಲಾವತಿ ಗಸ್ತೆ ಇತರರಿದ್ದರು. 
ಜಿಲ್ಲೆ

ಖಾನ್‌ಗೆ ಅಧಿಕಾರದಲ್ಲಿ ಮುಂದುವರಿವ ನೈತಿಕತೆ ಏನಿದೆ?

ಬಸವಕಲ್ಯಾಣ: ನಗರದ ಪೌರ ಕಾರ್ಮಿಕರಿಗೆ ೧೫ ತಿಂಗಳಿಂದ ವೇತನ ನೀಡಿಲ್ಲ. ಜಿಲ್ಲೆಯವರೇ ಆದ ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಏನಿದೆ ಎಂದು ಶಾಸಕ ಶರಣು ಸಲಗರ ಪ್ರಶ್ನಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪೌರ ನೌಕರರ ಸಂಘದ ತಾಲೂಕು ಘಟಕದಿಂದ ನಗರಸಭೆ ಎದುರು ನಡೆಯುತ್ತಿರುವ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ, ಮನವಿ ಪತ್ರ ಸ್ವೀಕರಿಸಿದ ಅವರು, ಶ್ರಮವಹಿಸಿ ಪ್ರಾಮಾಣಿಕವಾಗಿ ದುಡಿಯುವ ಪೌರ ಕಾರ್ಮಿಕರಿಗೆ ಪರಿಸ್ಥಿತಿ, ಅವರ ಕಷ್ಟ ನೋಡಿ. ನಗರದಲ್ಲಿ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದಿವೆ. ಇಂಥ ಪರಿಸ್ಥಿತಿ ನೋಡಿದರೆ ಸಚಿವರು ರಾಜೀನಾಮೆ ಕೊಡುವುದು ಸೂಕ್ತ ಎಂದರು.

ಪೌರ ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಸಚಿವ ರಹೀಮ್‌ಖಾನ್ ಅವರು ಸಿಎಂ ಸಿದ್ದರಾಮಯ್ಯ ಬಳಿ ಕುಳಿತು ಬೇಡಿಕೆ ಈಡೇರಿಸಲು ಮುಂದಾಗಬೇಕು. ವೇತನ ಸೇರಿದಂತೆ ಇತರ ಬೇಡಿಕೆ ಕುರಿತು ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎದು ಸಲಗರ ಭರವಸೆ ನೀಡಿದರು.

ಈ ಹಿಂದು ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಪೌರ ಕಾರ್ಮಿಕರನ್ನು ಕಾಯಂಗೊಳಿಸಿದ್ದರು. ಆದರೆ ಈಗ ಏನು ಮಾಡಲಾಗುತ್ತಿದೆ ? ಪೌರ ಕಾರ್ಮಿಕರ ವೇತನ ಕೇಳಿದರೆ ನಗರಸಭೆ ಅನುದಾನದಲ್ಲಿ ಕೊಡಲು ಹೇಳಲಾಗುತ್ತಿದೆ. ಈ ಅನುದಾನ ವೇತನಕ್ಕೆ ಬಳಸಿದರೆ ಅಭಿವೃದ್ಧಿ ಕಾರ್ಯಗಳು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಪೌರಾಯುಕ್ತ ರಾಜು ಬಣಕಾರ, ಸಂಘದ ತಾಲೂಕಾಧ್ಯಕ್ಷ ಸೂರ್ಯಕಾಂತ ಶಾಖಾ, ಪ್ರಮುಖರಾದ ಮಹ್ಮದ್ ಅಲೀಮ್, ಶ್ರೀದೇವಿ ಸುಭಾಷ, ಕಲಾವತಿ ಗಸ್ತೆ, ಸುರೇಶ ಮುಜನಾಯಕ್ ಇತರರಿದ್ದರು.