ಕಕ್ಕೇರಿ, ಬೆಳಗಾವಿ: ಖಾನಾಪುರ ತಾಲೂಕಿನ ಅಭಿವೃದ್ಧಿಗಾಗಿ 1,500 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು. ತಾಲೂಕಿನ ಕಕ್ಕೇರಿ ಸಮೀಪದ ಹುಲಿಕೇರಿಯಲ್ಲಿ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸೇತುವೆ ನಿರ್ಮಾಣಕ್ಕೆ ಒಂದು ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ಸೇತುವೆ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಸದಸ್ಯ ರಿಯಾಜ್ ಅಹ್ಮದ ಪಾಟೀಲ, ಗ್ರಾಪಂ ಅಧ್ಯಕ್ಷ ಭೀಮಪ್ಪ ಅಂಬೋಜಿ, ಉಪಾಧ್ಯಕ್ಷ ಕಾಶೀಂ ಹಟ್ಟಿಹೊಳಿ, ಪಿಕೆಪಿಎಸ್ ಅಧ್ಯಕ್ಷ ಕಾರ್ತಿಕ ಅಂಬೋಜಿ, ಪಾಂಡು ಮಿಟಗಾರ, ಮಹಾದೇವ ಕೋಳಿ, ಗೀತಾ ಅಂಬಡಗಟ್ಟಿ, ಮಲ್ಲಪ್ಪ ಮರಬದ ಮಾತನಾಡಿದರು.ಇಮಾಮಸಾಬ್ ಕಿತ್ತೂರ, ಬಾಬುಲಾಲ ಇಟಗಿ, ಪಾಂಡು ಪಾಟೀಲ, ಅರುಣ ಬೆಳಗಾಂಕರ, ಅದೃಶ್ಯ ದುಂಡಪ್ಪನವರ, ಅನ್ವರ್ ಭಗವಾನ, ಮೌಳಿ ವಾರದ, ಬೈರು ಮಾಂಡವಿ ಇತರರು ಇದ್ದರು.