ಜಿಲ್ಲೆ

ಖರ್ಗೆಗೆ ಅದ್ದೂರಿ ಸನ್ಮಾನಕ್ಕೆ ನಿರ್ಧಾರ

ಭಾಲ್ಕಿ: ರಾಜ್ಯಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದ್ದೂರಿ ಸಮಾರಂಭ ಆಯೋಜಿಸಿ, ಗೌರವಿಸಲಾಗುವುದು ಎಂದು ಮುಖಂಡ ಎಲ್.ಜಿ.ಗುಪ್ತಾ ಹೇಳಿದರು. ಅಂಬೆಸಂಗಾವಿ ಕ್ರಾಸ್ ಹತ್ತಿರದ ಖಾಸಗಿ ಫಾರ್ಮ್ಹೌಸ್‌ನಲ್ಲಿ ಮಾಜಿ ಎಂಎಲ್‌ಸಿ ಕೆ.ಪುಂಡಲಿಕರಾವ ಅಧ್ಯಕ್ಷತೆಯಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪುಂಡಲಿಕರಾವ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೌರವಿಸುತ್ತಿರುವುದು ಸ್ತುತ್ಯಾರ್ಥ. ಸಚಿವರಾದ ಈಶ್ವರ ಖಂಡ್ರೆ, ರಹೀಮ್‌ಖಾನ್ ಅವರೊಂದಿಗೆ ಚರ್ಚಿಸಿ ಸ್ಥಳ, ದಿನಾಂಕದ ಕುರಿತು ನಿರ್ಧರಿಸೋಣ ಎಂದರು.

ಪ್ರಮುಖರಾದ ಅಶೋಕ ಸಾನೆ, ಕೆ.ಬಿ.ಗೋಖಲೆ, ಶಿವರಾಜ, ಗೌತಮ ಏಣಕೂರ, ಪ್ರಲ್ಹಾದ್ ಗಾಯಕವಾಡ, ತುಕಾರಾಮ ದೊಡ್ಡಿ ಮಾತನಾಡಿ, ಸಮುದಾಯದವರೇ ಕೂಡಿಕೊಂಡು ಭವ್ಯ ಕಾರ್ಯಕ್ರಮ ಮಾಡೋಣ ಎಂದರು. ಪ್ರಮುಖರಾದ ಬಕ್ಕಪ್ಪ ಕೋಟೆ, ಶಂಕರರಾವ ದೊಡ್ಡಿ, ದಿಲೀಪ ಶಿಂಧೆ, ಓ.ವಿ.ಗುರು, ವಿಶ್ವನಾಥ ಮೋರೆ, ತಿಪ್ಪಣ್ಣ ಶಿವಪುರೆ, ಡಾ.ಕಾಶೀನಾಥ ಚೆಲ್ವಾ, ಶ್ರಾವಣ ಗಾಯಕವಾಡ, ಅಶೋಕ ಮೌರ್ಯ, ಕೀರ್ತಿರತನ ಸೋನಾಳೆ, ಸಂಜೀವಕುಮಾರ ಗಾಯಕವಾಡ, ಪ್ರದೀಪ ಗುಪ್ತಾ, ಕಲ್ಲಪ್ಪ ಇಸ್ಲಾಮಪುರ, ದಿಗಂಬರ ಧೂಳೆ, ವೀರಶೆಟ್ಟಿ ಮೂಲಗೆ, ಮಾಧವರಾವ ಶಿಂಧೆ, ಶಿವರಾಜ ಸಾಗರ, ಕುಲದೀಪ ಕಾಂಬ್ಳೆ, ಮಹಾದೇವ ಇತರರಿದ್ದರು.