ಜಿಲ್ಲೆ

ಖರ್ಗೆ, ಸಿದ್ದು ವಿರುದ್ಧ ಸಿಡಿದ ಮಾದಿಗರು

ಕಲಬುರಗಿ: ಒಳ ಮೀಸಲು ಜಾರಿ ಮಾಡಲು ಮೀನಾಮೇಶ ಎಣಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಜಾರಿಗೆ ಹಿಂದೇಟು ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಹಿರಂಗ ಬೆಂಬಲ ನೀಡದ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಗರದಲ್ಲಿ ಸಹಸ್ರಾರು ಮಾದಿಗರು ಬುಧವಾರ ಬೃಹತ್ ಅರೆಬೆತ್ತಲೆ ಪ್ರತಿಭಟನೆ ಮಾಡಿ, ಕಿಡಿ ಕಾರಿದರು.
ಒಳ ಮೀಸಲು ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ನಗರದ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ನೂರಾರು ಹಲಗೆ, ಸಹಸ್ರಾರು ಮಾದಿಗರು ಅರೆಬೆತ್ತಲಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು. ವಚನ ಭ್ರಷ್ಟ ಸಿಎಂ ಸಿದ್ದರಾಮಯ್ಯಗೆ ಧಿಕ್ಕಾರ, ಮಾದಿಗ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ವಿಳಂಬ ಮಾಡುತ್ತಿರುವರಿಗೆ ಧಿಕ್ಕಾರ ಕೂಗಿದರು.
ಮುಖಂಡ ರಮೇಶ ವಾಡೇಕರ್ ಮಾತನಾಡಿ, ಸುದೀರ್ಘ ೩೦ ವರ್ಷದ ಹೋರಾಟ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಮಾತಿನಂತೆ ನಡೆದುಕೊಳ್ಳಬೇಕು. ಚುನಾವಣೆಯಲ್ಲಿ ಭರವಸೆ ನೀಡಿದಂತೆ ಆರನೇ ಗ್ಯಾರಂಟಿ ಜಾರಿ ಮಾಡಬೇಕು. ಸಿದ್ದರಾಮಯ್ಯ ಮಾತೆತಿದರೆ ಯಾರಿಗೂ ಹೆದರಲ್ಲ ಅಂತಾರೆ, ಯಾಕೆ ಹೆದರುತ್ತಿದ್ದಾರೆ ಎಂದು ಪ್ರಶ್ನಿಸಿದರು. ಒಳಮೀಸಲು ವಿರೋಧಿಸಿ, ಷಡ್ಯಂತ್ರ ಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಸೇಡAನ ವಿಜಯಕುಮಾರ ಆಡಕಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಒಳ ಮೀಸಲಿಗೆ ತಡೆ ಒಡ್ಡಲಾಗುತ್ತಿದೆ. ಡಾ.ಮಲ್ಲಿಕಾರ್ಜುನ ಖರ್ಗೆ ರಾಷ್ಟಿçÃಯ ನಾಯಕರಾಗಲು ಮಾದಿಗರು ಕಾರಣ. ಹೀಗೆ ಮುಂದುವರಿದರೆ ಶಾಶ್ವತವಾಗಿ ಕಾಂಗ್ರೆಸ್‌ಗೆ ಮನೆಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಳ ಮೀಸಲು ಶೀಘ್ರ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ ಸಲ್ಲಿಸಲಾಯಿತು. ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು
ಪ್ರಮುಖರಾದ ಗೋಪಾಲರಾವ ಕಟ್ಟಿಮನಿ, ದಶರಥ ಕಲಗುರ್ತಿ, ಶಾಮ ನಾಟೀಕಾರ, ರಮೇಶ ವಾಡೇಕರ್, ರಾಜು ಮುಕ್ಕಣ್ಣ, ಮಲ್ಲಿಕಾರ್ಜುನ ಜಿನ್ನಕೇರಿ, ರಾಜು ಕಟ್ಟಿಮನಿ, ರಾಜು ವಾಡೇಕರ್, ಗುರು ಭಂಡಾರಿ, ರಾಜು ಹದನೂರ, ದಿಗಂಬರ ತ್ರಿಮೂರ್ತಿ, ಪ್ರದೀಪ ಬಾಚನಾಳ, ಮಲ್ಲಿಕಾರ್ಜುನ ದಿನ್ನಿ, ಗೋಪಿಕೃಷ್ಣ ಗಡ್ಡೇನವರ, ಸುಂದರ ಡಿ.ಸಾಗರ, ರಂಜೀತ ಮೂಲಿಮನಿ, ಗುಂಡು ಸಂಗವಾರ, ಮಲ್ಲಿ ಸರಡಗಿ, ಗುಂಡೇಶ ಶಿವಣೂರ, ಮಲ್ಲಪ್ಪ ಮಾದರ, ಬಸವರಾಜ ಜವಳಿ, ಮಲ್ಲಪ್ಪ ಚಿಗನೂರ, ಹಣಮಂತ ಕಂದಳ್ಳಿ, ಸುಭಾಷ ರಟ್ನಡಗಿ, ಗಣೇಶ ಕಟ್ಟಿಮನಿ ಮೇಳಕುಂದಾ ಇತರರಿದ್ದರು.