ಕಲಬುರಗಿ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದಲ್ಲಿ ಕಾಂಗ್ರೆಸ್ ಕರ‍್ಯರ‍್ತರು, ರಾಜಕೀಯ ಪ್ರೇರಿತ ಪೊಲೀಸರು ಕಾನೂನು ಬಾಹಿರವಾಗಿ ದಿಗ್ಬಂಧನ ಹಾಕಿದ್ದು ಖಂಡಿಸಿ ಕಲಬುರಗಿಯಲ್ಲಿ ಶನಿವಾರ ಬಿಜೆಪಿಯಿಂದ ರಾಜ್ಯಮಟ್ಟದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ತಿಳಿಸಿದರು.
ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ಟನೆ ಚಿತ್ತಾಪುರದಲ್ಲಿ ನಡೆದಿದೆ. ಅಂಬೇಡ್ಕರ್ ಪುಸ್ತಕ ಹಿಡಿದು, ಸಂವಿಧಾನ, ಪ್ರಜಾಪ್ರಭುತ್ವ ಎನ್ನುವವರ ಗುಂಡಾಗಿರಿ ವಿರುದ್ಧ ಶನಿವಾರ ಬೆಳಗ್ಗೆ ೧೦.೩೦ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ, ಗೋವಿಂದ ಕಾರಜೋಳ, ಸಿಟಿ ರವಿ ಸೇರಿ ರಾಜ್ಯದ ಎಲ್ಲ ನಾಯಕರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೇಡಿಕೆಗಳು: ಮುಖ್ಯಮಂತ್ರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿದ್ದರೆ, ಪ್ರತಿಪಕ್ಷದ ನಾಯಕ ಬೇಕಿದ್ದರೆ ಕೂಡಲೇ ಪ್ರಿಯಾಂಕ್ ರ‍್ಖಗೆಯ ರ‍್ವಾಧಿಕಾರಕ್ಕೆ ತಡೆ ಹಾಕಬೇಕು. ಪ್ರಿಯಾಂಕ್ ರ‍್ಖಗೆರನ್ನು ಸಂಪುಟದಿಂದ ಕಿತ್ತು ಹಾಕಬೇಕು, ರಾಜಕಾರಣಿಗಳ ಅಣತಿಯಂತೆ ಕುಣಿದ ಎಎಸ್ಪಿ, ಎಸ್ಐ, ಡಿವೈಎಸ್ಪಿಯನ್ನು ಕೂಡಲೇ ಅಮಾನತು ಮಾಡಬೇಕು, ಬಿಜೆಪಿ ಮುಖಂಡರ ವಿರುದ್ಧ ಹಾಕಿರುವ ಕೇಸ್ ವಾಪಸ್ ಪಡೆಯಬೇಕು, ಛಲವಾದಿ ನಾರಾಯಣಸ್ವಾಮಿ ಅವರಿಗೆ ಕಿರುಕುಳ ನೀಡಿದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೇಳಿದರು.
ಛಲವಾದಿ ಅವರನ್ನು ಕೂಡಿ ಹಾಕಿದ ವೇಳೆ ಪ್ರಿಯಾಂಕ್ ರ‍್ಖಗೆ ಅವರಿಂದ ಯರ‍್ಯಾರಿಗೆ ೋನ್ ಬಂದಿವೆ ಎಂಬ ನ್ಯಾಯಾಂಗ ತನಿಖೆ ಆಗಬೇಕು. ಜಿಲ್ಲಾಧಿಕಾರಿ ಸೇರಿ ಎಲ್ಲರೂ ಸಚಿವ ರ‍್ಖಗೆ ಕೈಗೊಂಬೆಯಂತೆ ರ‍್ತಿಸುತ್ತಿದ್ದು, ಇವರ ಈ ಕೆಲಸ ಎಐಸಿಸಿ ಅಧ್ಯಕ್ಷ ಮಲ್ಲಿಕರ‍್ಜುನ ರ‍್ಖಗೆ ಅವರಿಗೆ ಶೋಭೆ ತರುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.
ಶಾಸಕರಾದ ಡಾ.ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ ನಮೋಶ, ಡಾ.ಅವಿನಾಶ ಜಾಧವ್, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಎಸ್ಸಿ ಮರ‍್ಚಾ ರಾಜ್ಯಾಧ್ಯಕ್ಷ ಮಹೇಂದ್ರ ಕೌತಾಳ, ಪ್ರಮುಖರಾದ ದತ್ತಾತ್ರೇಯ ಪಾಟೀಲ್ ರೇವೂರ, ಸುಭಾಷ ಗುತ್ತೇದಾರ್, ಅಮರನಾಥ ಪಾಟೀಲ್, ಶಿವರಾಜ ಪಾಟೀಲ್ ರದ್ದೇವಾಡಗಿ, ನಿತಿನ್ ಗುತ್ತೇದಾರ್, ಅವ್ವಣ್ಣ ಮ್ಯಾಕೇರಿ, ಉಮೇಶ ಪಾಟೀಲ್ ಇತರರಿದ್ದರು.