ಗುರುಮಿಠಕಲ: ಕಾಂಗ್ರೆಸ್ ಮತ್ತು ಖರ್ಗೆ ಕುಟುಂಬಕ್ಕೆ ಈ ಕ್ಷೇತ್ರ ರಾಜಕೀಯ ಜೀವನಾಡಿಯಾಗಿದೆ ಎಂದು ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಗುರುಮಠಕಲï ಹಾಗೂ ಸೈದಾಪುರ ಬ್ಲಾಕ್ ಕಾಂಗ್ರೆಸ್‌ನಿAದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಯಾಕೋ ನಮ್ಮ ಮೇಲೆ ಮುನಿಸಿಕೊಂಡಿದ್ದು, ಅಲ್ಲದೆ ಮತಗಳ ಅಂತರ ಕೂಡ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರದ ಮತದಾರರು ಕಳೆದ ಎರಡು ವಿಧಾನಸಭೆ ಹಾಗೂ ಎರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪP್ಷÀಕ್ಕೆ ಮತ ನೀಡದೆ ನಮ್ಮನ್ನು ಕಡೆಗಣಿಸುತ್ತಿರುವುದನ್ನು ನಮಗೆ ಚಿಂತೆಗೀಡುಮಾಡಿದೆ ಎಂಬ ದಾಟಿಯಲ್ಲಿ ತಮ್ಮ ಅಸಮಧಾನ ಹೊರ ಹಾಕಿದ ಅವರು, ನಾನು ಈ ಕ್ಷೇತ್ರಕ್ಕೆ ಏನು ಮಾಡಬೇಕು ಹೇಳಿ ಅದನ್ನು ನಾನು ಮಾಡುತ್ತದೆ. ಈ ಕ್ಷೇತ್ರಕ್ಕೆ ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿz್ದÁರೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಅತಿ ದೊಡ್ಡ ನಾಯಕರಾಗಲು ಗುರುಮಠಕಲ್ ಕ್ಷೇತ್ರವೇ ಮೂಲ ಕಾರಣ. ಈ ಕ್ಷೇತ್ರದ ಜನರು ಈಗ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಸಂಸದರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಮಾತನಾಡಿದರು. ಶಾಸಕ ವೇಣುಗೋಪಾಲ ನಾಯಕ ಮಾತನಾಡಿದರು. ಇದೇ ವೇಳೆ ನೂತನ ಎಂಎಲïಸಿಗಳಾದ ಚಂದ್ರಶೇಖರ ಪಾಟೀಲï ಹಾಗೂ ಜಗದೇವ ಗುತ್ತೇದಾರ್ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ, ಜಿ¯್ಲÁ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯP್ಷÀ ಶ್ರೇಣಿ ಕುಮಾರ ಧೋಕಾ, ಕೆಪಿಸಿಸಿ ಸದ್ಯಸ ಮರೀಗೌಡ ಹುಲಿಕಲ, ಮುಖಂಡರಾದ ದತ್ತು ಬಸವಕಲ್ಯಾಣ, ವಿನೋದ್ ಗೌಡ, ಬ್ಲಾಕ್ ಅಧ್ಯP್ಷÀ ಕೃಷ್ಣ ಚಪೇಟ್ಲಾ, ಸೈದಾಪುರ ಬ್ಲಾಕ್ ಅಧ್ಯP್ಷÀ ನಿರಂಜನ ರೆಡ್ಡಿ ಇತರರಿದ್ದರು.