ಚಿತ್ರದುರ್ಗ: ದುಶ್ಚಟಗಳಿಂದ ದೂರವಿರಬೇಕು ಎಂದು ಸಿಇಎನ್ ಠಾಣೆ ಪಿಐ ಎನ್.ವೆಂಕಟೇಶ್ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ನಗರದ ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಪ್ರವೇಶೋತ್ಸವದಲ್ಲಿ ಮಾತನಾಡಿ, ಮಾದಕ ವಸ್ತು ಸೇವನೆ ಹೇಗೆ ಅಪರಾಧವೂ ಹಾಗೆಯೇ ಅವುಗಳ ಶೇಖರಣೆ, ಸಾಗಾಣೆ ಹಾಗೂ ಖರೀದಿಗೆ ನೆರವಾಗವುದು ಕೂಡ ಅಪರಾಧವಾಗುತ್ತದೆ ಎಂದು ಎಚ್ಚರಿಸಿದರು.
ಮಾದಕ ವಸ್ತುಗಳ ಸೇವನೆ ಚಟಕ್ಕೆ ಒಮ್ಮೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದೆಡೆ ಸಂಪೂರ್ಣ ಗಮನ ಹರಿಸಬೇಕು. ಸೈಬರ್ ಅಪರಾಧಗಳೆಡೆ ಜಾಗೃತ ವಹಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಎಸ್.ವಿ.ರವಿಶಂಕಶ್, ಪಿ.ರಘು ಮತ್ತಿತರರು ಇದ್ದರು.