ಹಂದಿಗುಂದ: ಕುಡಚಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಕ್ಷೇತ್ರ ಅಭಿವೃದ್ಧಿ ಮಾಡಲು ದುಡಿಯೋಣ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಸಮೀಪದ ಪಾಲಬಾವಿ ಗ್ರಾಮದಲ್ಲಿ ಸೋಮವಾರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕುಡಚಿ ಕ್ಷೇತ್ರದಲ್ಲಿ ೩೯ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮನೆಗಳ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದರು.
ಡಾ.ಸಿ.ಬಿ. ಕುಲಿಗೋಡ, ಪುರಸಭೆ ಸದಸ್ಯ ರಮೇಶ ಯಡವಣ್ಣವರ, ಪರಪ್ಪಗೌಡ ಖೇತಗೌಡರ, ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಬಿಇಒ ಬಸವರಾಜಪ್ಪ.ಆರ್, ಸಿಡಿಪಿಒ ಭಾರತಿ ದೊಡಮನಿ, ಎಇ ಜಿ.ಎಂ. ಗೂಳಪ್ಪನವರ, ತಾಪಂ ಮಾಜಿ ಅಧ್ಯಕ್ಷ ರವಿಶಂಕರ ನರಗಟ್ಟಿ, ಪಿಕೆಪಿಎಸ್ ಉಪಾಧ್ಯಕ್ಷ ಹನುಮಸಾಬ ನಾಯಿಕ, ಗ್ರಾಪಂ ಅಧ್ಯಕ್ಷೆ ಶೋಭಾ ಕುರಬೆಟ್ಟಿ, ಇಲಾಯಿ ಕಾಗವಾಡ, ಗಿರೆಪ್ಪ ಬಳಗಾರ, ಲಕ್ಶ್ಮಣ ಮೇತ್ರಿ, ಪಿಡಿಒ ಶ್ರೀಕಾಂತ ಪಾಟೀಲ, ಕೆಂಪಣ್ಣ ಕುರನಿಂಗ, ಪ್ರಭು ಕರೋಶಿ ಇತರರಿದ್ದರು.