ಜಿಲ್ಲೆ

ಕ್ಷೇತ್ರದ ಎಲ್ಲ ಸಮಾಜಗಳ ಅಭಿವೃದ್ಧಿಗೆ ಶ್ರಮಿಸುವೆ

ಸುರಪುರ: ಕ್ಷೇತ್ರದ ಎಲ್ಲ ಸಮಾಜಗಳ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮಿಸಲಾಗುವುದು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ರಂಗAಪೇಟೆ ವಾರ್ಡ್ ೨೨ರಲ್ಲಿ ಅಮೃತ ನಗರೋತ್ಥಾನ ಹಂತ-೪ರ ಯೋಜನೆಯಡಿ ೫೦.೯೨ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಸ್ವಕುಳ ಸಾಳಿ ನೂತನ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಕುಳ ಸಮಾಜದ ಜತೆ ಸದಾ ಇದ್ದು, ಸಮಾಜ ಬಾಂಧವರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಸ್ವಕುಳಿ ಸಾಳಿ ಸಮಾಜಕ್ಕೆ ಭವನ ನಿರ್ಮಿಸಿ ಕೊಡುವುದಾಗಿ ನಮ್ಮ ತಂದೆ ಅವರು ಮಾತು ಕೊಟ್ಟಿದ್ದರು. ಅದರಂತೆ ನಿರ್ಮಿಸಿ ಕೊಡಲಾಗಿದ್ದು, ಅದು ನನ್ನ ಕೈಯಾರೆ ಉದ್ಘಾಟನೆಗೊಳ್ಳುತ್ತಿರುವುದು ನನ್ನ ಸುದೈವವಾಗಿದೆ. ಅಲ್ಲದೆ ತಂದೆಯವರು ಎಲ್ಲ ಸಮಾಜಗಳು ಒಂದೇ, ಎಲ್ಲರೂ ಸಮಾನರು, ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳುತ್ತಿದ್ದರು. ಅದೇ ದಾರಿಯಲ್ಲಿ ನಾನು ಸಾಗುತ್ತಿರುವುದಾಗಿ ಹೇಳಿದರು.

ಜನರ ಸೇವೆ ಮಾಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂಬ ಗುರಿ ನನ್ನದಾಗಿದೆ. ಹಗಲು-ರಾತ್ರಿ ಸೇವೆ ಮಾಡುವೆ. ಯಾವುದೇ ಸಮಯದಲ್ಲಿ ಅದೂ ರಾತ್ರಿ ೧೨ ಗಂಟೆಯಾದರೂ ಸರಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿದರು.

ಕಾಂಗ್ರೆಸ್ ಪಕ್ಷ ಬಡವರ ಪಕ್ಷ ನಮ್ಮ ಪಕ್ಷ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಪಕ್ಷವಾಗಿದೆ. ಬಡವರ ಪಕ್ಷ, ದುಡಿಯುವ ಜನರ ಪಕ್ಷ, ದೇಶಕ್ಕೆ ಮೂಲಸೌಕರ್ಯಗಳನ್ನು ಒದಗಿಸಿ ಕೊಟ್ಟ ಪಕ್ಷ. ದೇಶದಲ್ಲಿ ಅನೇಕ ರಸ್ತೆ, ಸೇತುವೆ, ನೀರಾವರಿ, ವಿದ್ಯುತ್ ಸೌಲಭ್ಯ ಕಲ್ಪಿಸಿದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ ಎಂದರು.

ನಗರಸಭೆ ಪೌರಾಯುಕ್ತ ಬಸವರಾಜ್ ಟಣಕೇದಾರ ಪ್ರಾಸ್ತಾವಿಕ ಮಾತನಾಡಿದರು. ಸಮಾಜದ ಜ್ಞಾನೇಶ್ವರ ಪಾಣಿಭಾತೆ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್, ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ನಗರ ಯೋಜನಾ ಪ್ರಾಧಿಕಾರಿ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಪ್ರಮುಖರಾದ ರಾಜಶೇಖರಗೌಡ ವಜ್ಜಲ್, ನಿಂಗರಾಜ್ ಬಾಚಿಮಟ್ಟಿ, ಬೀರಲಿಂಗ ಬಾದ್ಯಾಪುರ, ರವಿಚಂದ್ರ ಸಾಹುಕಾರ ಆಲ್ದಾಳ, ಅಬ್ದುಲ್ ಗಫಾರ್ ನಗನೂರಿ, ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾAತ ಪಾಡಮುಖಿ, ನಗರಾಭಿವೃದ್ಧಿ ಕೋಶದ ಅಧಿಕಾರಿ, ಕೆ.ವಿಶ್ವನಾಥ, ಗುತ್ತಿಗೆದಾರ್ ನಾರಾಯಣ ಸಿಂಗಾಡೆ ವೇದಿಕೆಯಲ್ಲಿದ್ದರು. ನಗರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಸ್ವಕುಳ ಸಾಳಿ ಸಮಾಜ ಬಾಂಧವರು, ಉಪಸ್ಥಿತರಿದ್ದರು. ನಿವೇಶನ ದಾನಿ ಮಲ್ಲಯ್ಯ ಪಾಣಿಭಾತೆ ಅವರನ್ನು ಈ ವೇಳೆ ಸ್ಮರಿಸಲಾಯಿತು. ನಗರಸಭೆ ಎಇಇ ಶಾಂತಪ್ಪ ಹೊಸೂರು ಸ್ವಾಗತಿಸಿದರು. ದುರ್ಗಪ್ಪ ನಾಯಕ ನಿರೂಪಿಸಿದರು. ಜೆಇ ಮಹೇಶ್ ಮಾಳಗಿ ವಂದಿಸಿದರು.