ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಮೇಲೆ ಮೂವರು ಸೇರಿಕೊಂಡು ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಿದ ಟನೆ ಕಣಬರ್ಗಿಯ ಬಸವನಕೊಳ್ಳದಲ್ಲಿ ಸೋಮವಾರ ನಡೆದಿದೆ. ಬಸವನಕೊಳ್ಳದ ನಿವಾಸಿ ಮಂಜುನಾಥ ಕೆಂಪ( 23) ಹಲ್ಲೆಗೊಳಗಾದ ಯುವಕ. ನಾಗರಾಜ್ ಶಿಗೆಹಳ್ಳಿ ಗೆಳೆಯರು ಹಲ್ಲೆ ಮಾಡಿದ್ದಾರೆ. ಭಾನುವಾರ ಮಂಜುನಾಥ ಮತ್ತು ನಾಗರಾಜ್ ನಡುವೆ ಕ್ಷುಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಸೋಮವಾರ ಬೆಳಗ್ಗೆ ನಾಗರಾಜ್ ಆತನ ಗೆಳೆಯರು ಮಂಜುನಾಥ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.