ಜಿಲ್ಲೆ

ಕ್ಷುದ್ರಗ್ರಹ ಹುಡುಕಾಟ ಅಭಿಯಾನ: ಆಸಕ್ತರು ಅರ್ಜಿ ಸಲ್ಲಿಸಿ

ಮೈಸೂರು: ಕಾಸ್ಮೋಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ (ಕಾಸ್ಮೋಸ್), ಮೈಸೂರು ಮತ್ತು ಹ್ಯಾಂಡ್ಸ್ ಆನ್ ಯೂನಿವರ್ಸ್, ಭಾರತ ವಿಭಾಗ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಕ್ಷುದ್ರಗ್ರಹ ಹುಡುಕಾಟ ಅಭಿಯಾನ ಆಯೋಜಿಸಲಾಗಿದೆ.


ಇದು ಅಂತಾರಾಷ್ಟ್ರೀಯ ಕ್ಷುದ್ರಗ್ರಹ ಹುಡುಕಾಟ ಅಭಿಯಾನದ ಭಾಗವಾಗಿದ್ದು, ಅಂತಾರಾಷ್ಟ್ರೀಯ ಖಗೋಳಕಾಯಗಳ ಹುಡುಕಾಟ ಸಂಸ್ಥೆ ನೇತೃತ್ವ ವಹಿಸಲಿದೆ. ಆಸಕ್ತರು ದೂರದರ್ಶಕಗಳಿಂದ ಸಿಗುವ ಮಾಹಿತಿಯನ್ನು ಹೇಗೆ ಸಂಶೋಧನೆಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಅಭಿಯಾನದ ಮೂಲಕ ಕಲಿಯಬಹುದಾಗಿದೆ.


ಅಭ್ಯರ್ಥಿಗಳು ಹೊಸ ಕ್ಷುದ್ರಗ್ರಹವನ್ನು ಕಂಡುಹಿಡಿದಲ್ಲಿ ಅವರ ಹೆಸರನ್ನು ಪ್ರಾಥಮಿಕ ಆವಿಷ್ಕಾರಗಳ ಭಾಗವಾಗಿ ಪಟ್ಟಿ ಮಾಡಲಾಗುತ್ತದೆ. ನಂತರ ಈ ಮೇಲೆ ಸೂಚಿಸಿದ ಸಂಸ್ಥೆಗಳು ದೃಢಪಡಿಸಿದರೆ ಹೊಸ ಕ್ಷುದ್ರಗ್ರಹ ಕಂಡುಹಿಡಿದ ತಂಡಕ್ಕೆ ಕ್ಷುದ್ರಗ್ರಹವನ್ನು ಹೆಸರಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ.


ಈ ಅಭಿಯಾನವು ಶುಲ್ಕ ರಹಿತವಾಗಿದ್ದು, ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅರ್ಹತೆಯ ಮಾನದಂಡಗಳನ್ನು ಪೂರೈಸುವ ಖಗೋಳ ವಿಜ್ಞಾನದ ಆಸಕ್ತರು ಆ.5ರ ಒಳಗೆ ಅರ್ಜಿ ಸಲ್ಲಿಸಬಹುದು. https://bit.ly/asteroid_search ಮೂಲಕ ನೋಂದಾಯಿಸಿಕೊಳ್ಳಬೇಕು.


ಕನಿಷ್ಠ 13 ವರ್ಷ ವಯಸ್ಸಿನವರು, ವೈಯಕ್ತಿಕ ಕಂಪ್ಯೂಟರ್ ಸೌಲಭ್ಯ, ಅಂತರ್ಜಾಲದ ವ್ಯವಸ್ಥೆ ಗಣಕಯಂತ್ರದ ಬುನಾದಿ ಜ್ಞಾನವನ್ನು ತಿಳಿದವರು ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ಸಹಯೋಜನಾಧಿಕಾರಿ ಎನ್.ಅಮೋಘವರ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ಮಾಹಿತಿಗಾಗಿ ಇ-ಮೇಲ್ cosmos.epoc@iiap.res.in ಮತ್ತು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿರುವ ಕಾಸ್ಮೋಸ್ ಸಂಪರ್ಕಿಸಬಹುದು.