ಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಂಘದ ಕಚೇರಿಯಲ್ಲಿ ಎಂ.ವಿ.ವಿಶ್ವನಾಥ್ ಅವರನ್ನು ಸನ್ಮಾನಿಸಿದರು. 
ಜಿಲ್ಲೆ

ಕ್ಷೀರ ಕೇಂದ್ರಕ್ಕೆ ಗುಣಮಟ್ಟದ ಹಾಲು ನೀಡಿ

ಹಲಗೂರು: ರೈತರು ಕ್ಷೀರ ಕೇಂದ್ರಕ್ಕೆ ಗುಣಮಟ್ಟದ ಹಾಲನ್ನು ಹಾಕಿದರೆ ಸಂಘ ಬೆಳೆಯುವುದರ ಜತೆಗೆ ನೀವು ಸಹ ಅಭಿವೃದ್ಧಿಯಾಗಬಹುದು ಎಂದು ಕೆ.ಎಂ.ಎಫ್ ನಿರ್ದೇಶಕ ಎಂ.ವಿ.ವಿಶ್ವನಾಥ್ ಅಭಿಪ್ರಾಯಪಟ್ಟರು.

ಹಲಗೂರು ಸಮೀಪದ ಬ್ಯಾಡರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮ ಗ್ರಾಮದಲ್ಲಿ ಹಾಲು ಶೇಖರಣ ಕೇಂದ್ರ ಉದ್ಘಾಟನೆ ಆಗಿರುವುದು ಹೆಮ್ಮೆಯ ವಿಷಯ. ಎಷ್ಟೋ ಕಡೆ ಸ್ವಂತ ಕಟ್ಟಡ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಹ ನಿಮ್ಮ ಅನುಕೂಲಕ್ಕಾಗಿ ಬಿಎಂಸಿ ಮಂಜೂರು ಮಾಡಿ ಕೊಡುತ್ತೇನೆ. ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಸಂಘದ ಅಭಿವೃದ್ಧಿಗಾಗಿ ಶ್ರಮವಹಿಸುವಂತೆ ಕರೆ ನೀಡಿದರು.

ಬ್ಯಾಡರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 6 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಂಘದ ಕಟ್ಟಡವನ್ನು ಶಾಸಕ ಡಾ.ಕೆ.ಅನ್ನದಾನಿ ಉದ್ಘಾಟಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷ ಮಾದೇಗೌಡ, ಮನ್‌ಮುಲ್ ವಿಸ್ತರಣಾ ಅಧಿಕಾರಿ ಸಿದ್ದರಾಜು, ಮಧು, ನಿರ್ದೇಶಕರಾದ ಚಿಕ್ಕತಮ್ಮಯ್ಯ, ಬಿ.ಎಸ್.ಜಯರಾಮು, ಶಿವಶಂಕರ್, ರವಿಕುಮಾರ್, ಸಿದ್ದರಾಮು, ಚೇತನ, ನಾಗರಾಜು, ನಾಗಮಣಿ, ಮಂಜುಳಾ, ಕಾರ್ಯದರ್ಶಿ ಬಿ.ಮಾದೇಗೌಡ, ನಿಟ್ಟೂರು ಕೋಡಿಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಪ್ರಕಾಶ್, ಗೊಲ್ಲರಹಳ್ಳಿ ಹಾಲಿನ ಡೈರಿ ಕಾರ್ಯದರ್ಶಿ ಶಿವಲಿಂಗೇಗೌಡ ಸೇರಿದಂತೆ ಹಲವರು ಇದ್ದರು.