ಜಿಲ್ಲೆ

ಕ್ಷಯರೋಗ ಅಪಾಯಕಾರಿ ಪ್ರದೇಶ ಗುರುತಿಸಿ ಜನರ ಪರೀಕ್ಷೆ ಮಾಡಲು ಸಿಇಒ ಸೂಚನೆ

ಸಕ್ರಿಯ ಕ್ಷಯರೋಗ ಪತ್ತೆ ಅಂದೋಲನಕ್ಕೆ ಸಿಇಒ ಭನ್ವರಸಿಂಗ್ ಚಾಲನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯು ಕ್ಷಯರೋಗ ತಾಣವಾಗಿದ್ದು, ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಬೇಕು. ಕ್ಷಯದಿಂದ ಅಪಾಯದಲ್ಲಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಕಫ ಪರೀಕ್ಷೆ ಮಾಡಿಸಬೇಕು ಎಂದು ಜಿಪಂ ಸಿಇಒ ಭನ್ವರಸಿಂಗ್ ಮೀನಾ ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.
ಸೋಮವಾರ ನಗರದ ಜಗತ್ ವೃತ್ತದಲ್ಲಿರುವ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ಸಕ್ರಿಯ ಕ್ಷಯರೋಗ ಪತ್ತ ಆಂದೋಲನ ಉದ್ಫಾಟಿಸಿ ಮಾತನಾಡಿ, ರೋಗ ಪತ್ತೆಗೆ ಶೇ.೧೮ ರಷ್ಟು ಜನರನ್ನು ತಪಾಸಣೆಗೊಳಪಡಿಸಿ, ಕಫ ಮಾದರಿ ಪರೀಕ್ಷೆ ಮಾಡಬೇಕು ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ೩೧,೩೦,೩೭೯ ಜನಸಂಖ್ಯೆಯಿದ್ದು, ಸಂಶಯಾಸ್ಪದ ಶೇ. ೧೮ ರಷ್ಟು ಅಂದರೆ ೫,೫೩,೯೯೯ ಜನರನ್ನು ಈ ಕಾರ್ಯಕ್ರಮದಲ್ಲಿ ಗುರುತಿಸಲು ಕ್ಷಯರೋಗ ಪತ್ತೆ ಆಂದೋಲನ ಆಗಷ್ಟ ೨ವರೆಗೆ ನಡೆಯಲಿದೆ. ಗಂಡಾAತರ ಪ್ರದೇಶಗಳಾಗಿರುವ ಕೊಳಗೇರಿ, ಫ್ಯಾಕ್ಟರಿ ಮೊದಲಾದವುಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ, ತಾಲೂಕು ಸೇರಿದಂತೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವ್ ಕಂಡು ಬಂದವÀರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಸಾರ್ವಜನಿಕರು ಸಹರಿಸಬೇಕು ಎಂದು ಸಿಇಒ ಮೀನಾ ಕೋರಿದರು.
ಆರೋಗ್ಯ ಇಲಾಖೆಯ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ಮಾತನಾಡಿ, ಕ್ಷಯರೋಗ ಸಾಂಕ್ರಾಮಿಕವಾಗಿದೆ. ಹೀಗಾಗಿ ಹರಡದಂತೆ ಎಚ್ಚರಿಕೆ ವಹಿಸಬೇಕು. ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗ ಪತ್ತೆ ಹಚ್ಚಬೇಕು. ಅದಕ್ಕಾಗಿ ಕೆಲವು ತಂಡ ರಚಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಸಿಎಂಆರ್ ಉಪನಿರ್ದೇಶಕ ಡಾ.ಬನ್ನಪ್ಪ ಉಂಗುರ ಮಾತನಾಡಿದರು. ಸಿಇಒ ಅವರು ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ಜನರಿಗೆ ಮಾಹಿತಿ ನೀಡುವ ಆಟೋಕ್ಕೆ ಚಾಲನೆ ನೀಡಿದರು.ಬಿತ್ತಿ ಪತ್ರ ಬಿಡುಗಡೆಗೊಳಿಸಿದರು.
ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಚಂದ್ರಕಾAತ ನರಿಬೋಳ. ಆರ್‌ಸಿ ಹೆಚ್ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಕುಮಾರ ಕುಲಕರ್ಣಿ, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ. ಸೆಂಟ್ ಜಾನ್ ವೈದ್ಯಾಧಿಕಾರಿ ಡಾ.ಮಲ್ಲಾರಾವ ಮಲ್ಲೆ ಇದ್ದರು.
==