ಭಟ್ಕಳ: ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯ ನೀಲಕಂಠದ ಹುಲ್ಲುಕ್ಕಿಯಲ್ಲಿ ಘಟನೆ ನಡೆದಿದೆ.
ಭಟ್ಕಳ ಕಾರಗದ್ದೆ ನಿವಾಸಿ ಜುಬೇರ್ ಇರ್ಶಾದ್ ಮೃತ ಯುವಕ. ಈತ ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದ.
ಭಟ್ಕಳ ಅಗ್ನಿಶಾಮಕ ದಳ, ಎಸ್ ಡಿಆರ್ ಎಫ್ ತಂಡ ನೀರಿನಲ್ಲಿ ಮುಳುಗಿದ ಯುವಕನ ಪತ್ತೆಗೆ ಶ್ರಮಿಸಿತು. ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ತಹಸೀಲ್ದಾರ್ ಡಾ. ಸುಮಂತ ಬಿ. ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ್ ನಾಯಕ, ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ ಉಪಸ್ಥಿತರಿದ್ದರು.