ಜೂಜಾಡುತ್ತಿದ್ದವರನ್ನು ಮಾರಿಹಾಳ ಪೊಲೀಸರು ಬಂಧಿಸಿರುವುದು. 
ಜಿಲ್ಲೆ

ಕ್ಲಬ್ ಮಾಲೀಕ ಸೇರಿ 8 ಜನರ ಬಂಧನ

ಬೆಳಗಾವಿ: ಕೋವಿಡ್ ನಿಯಮ ಹಾಗೂ ಪರವಾನಗಿ ಷರತ್ತು ಉಲ್ಲಂಘಿಸಿ ಜೂಜಾಟ ನಡೆಸುತ್ತಿದ್ದ ಭಾಗ್ಯಲಕ್ಷ್ಮೀ ಸಾಮಾಜಿಕ ಮತ್ತು ಕ್ರೀಡಾ ಕ್ಲಬ್ ಮೇಲೆ ಪೊಲೀಸರು ಶುಕ್ರವಾರ ದಾಳಿ ನಡೆಸಿ, ಮಾಲೀಕ ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮದ ಭಾಗ್ಯಲಕ್ಷ್ಮೀ ಸಾಮಾಜಿಕ ಮತ್ತು ಕ್ರೀಡಾ ಕ್ಲಬ್ ಮಾಲೀಕ, ಕಣಬರ್ಗಿ ನಿವಾಸಿ ನಾಗೇಶ ಕೀರಪ್ಪ ಟ್ಯಾನಗಿ, ಮ್ಯಾನೇಜರ್, ಕಲಕಾಂಬ ನಿವಾಸಿ ಕರೆಪ್ಪ ಯಲ್ಲಪ್ಪ ನಾಯಕ, ರವಿ ಪ್ರಕಾಶ ಕಾನಟ್ಟಿ, ರುಕ್ಮಿಣಿ ನಗರದ ಶಮಲಾ ಇರದುಲ್ಲಾ ಮಕಾನದಾರ, ವೆಂಕಪ್ಪ ಸುಂಕಪ್ಪ ಸಂದಿಮನಿ, ಕಾಕತಿಯ ಕನ್ನಯ್ಯ ಸಿದ್ರಾಮ ಚಿಕ್ಕಲದಿನ್ನಿ, ಕಣಬರ್ಗಿಯ ಹನುಮಂತ ಈರಪ್ಪ ಶೀಗಿಹಳ್ಳಿ ಹಾಗೂ ಮುತಗಾದ ಸಂಜೀವ ಜಯಸಿಂಗ್ ಪಾಟೀಲ ಬಂಧಿತರು.

ಕಲಕಾಂಬ ಗ್ರಾಮದ ಕ್ಲಬ್‌ನಲ್ಲಿ ನಿಯಮಗಳನ್ನು ಉಲ್ಲಂಘಿಸಿ ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯಿಂದ ಕಾರ್ಯಾಚರಣೆ ನಡೆಸಿರುವ ಮಾರಿಹಾಳ ಠಾಣೆ ಪೊಲೀಸರು ಮಾಲೀಕ, ಸಿಬ್ಬಂದಿ ಸೇರಿದಂತೆ ಜೂಜೂಕೋರರನ್ನು ಬಂಧಿಸಿ, 6,100 ರೂ.ನಗದು ಹಾಗೂ 5 ಮೊಬೈಲ್ ಜಪ್ತಿಮಾಡಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಎಪಿಡೆಮಿಕ್ ಡಿಜಾಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.