ಮಸ್ಕಿ ತಾಲೂಕಿನ ಸಂತೆಕೆಲ್ಲೂರನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾಕೂಟವನ್ನು ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ ಉದ್ಘಾಟಿಸಿದರು 
ಜಿಲ್ಲೆ

ಕ್ರೀಡೆಯಿಂದ ಸದೃಢ ಆರೋಗ್ಯ ವೃದ್ಧಿ: ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ ಅನಿಸಿಕೆ

ಮಸ್ಕಿ: ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ಬುದ್ದಿನ್ನಿ ಸರ್ಕಾರಿ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ ಹೇಳಿದರು.


ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ಶುಕ್ರವಾರ ಸಂತೆಕಲ್ಲೂರು ವಲಯ ಮಟ್ಟದ 2023-24ನೇ ಸಾಲಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಮಾನಸಿಕ, ದೈಹಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿಯಾಗುತ್ತದೆ. ಕ್ರೀಡೆಗಳ ಉತ್ತೇಜನಕ್ಕೆ ಶಿಕ್ಷಣ ಇಲಾಖೆ ಆಟದ ಸಾಮಗ್ರಿ ಕಿಟ್ಗಳ ವಿತರಿಸಬೇಕು. ಕ್ರೀಡಾಕೂಟದಲ್ಲಿ ಉನ್ನತ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.


ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸಪ್ಪ ತನಿಖೆದಾರ ಮಾತನಾಡಿ, ಮಕ್ಕಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರು ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗದಂತೆ ಜಾಗರೂಕತೆವಹಿಸಬೇಕೆಂದು ಸಲಹೆ ನೀಡಿದರು.


ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಂಪಾಪತಿ, ಮುಖ್ಯ ಶಿಕ್ಷಕ ದುರುಗಣ್ಣ ಹೂವಿನಭಾವಿ, ಬಸನಗೌಡ ನಾಯಕವಾಡಿ, ವೀರಪ್ಪ, ಶಿಕ್ಷಣ ಸಂಯೋಜಕ ರಾಮಚಂದ್ರ ನಿರಾಳೆ, ಬಿಆರ್‌ಪಿ ಮಾನಪ್ಪ ನಂದ್ಯಾಳ ಸಿಆರ್‌ಪಿಗಳಾದ ಪರಶುರಾಮ, ರಾಮಸ್ವಾಮಿ, ಬುದ್ದಿನ್ನಿ ಗ್ರಾಪಂ ಸದಸ್ಯ ಚೆನ್ನಬಸಮ್ಮ ಭಜಂತ್ರಿ, ಪ್ರಥಮ ದರ್ಜೆ ಗುತ್ತೇದಾರ ಶಿವಕುಮಾರ ಸಜ್ಜನ್, ಪ್ರಮುಖರಾದ ಶ್ರೀ ನಿವಾಸಾಚಾರ್ಯ ಜೋಷಿ, ಮೌನೇಶ ದೇವರಮನಿ ಇದ್ದರು.