ಚಿತ್ರದುರ್ಗ: ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೊತೆಗೆ ಆರೋಗ್ಯ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ಪಿಯು ಉಪನಿರ್ದೇಶಕ ಪುಟ್ಟಸ್ವಾಮಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಪಪೂ ವಿಭಾಗ, ಬಾಲಕರ ಸರ್ಕಾರಿ ಪಪೂ ಕಾಲೇಜಿನಿಂದ ಈಚೆಗೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ತಮ್ಮಲ್ಲಿನ ಪ್ರತಿಭೆ, ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಮುಂದೆ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಿ ಕೀರ್ತಿ ತನ್ನಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್.ದೇವೇಂದ್ರಪ್ಪ ಮಾತನಾಡಿ, ಕ್ರೀಡೆಯು ದೈಹಿಕ-ಮಾನಸಿಕ ಸದೃಢತೆ, ಬಲಿಷ್ಠವಾಗಲು ಏಕಮಾತ್ರ ಮಾರ್ಗವಾಗಿದೆ ಎಂದರು.
ಇದೇ ವೇಳೆ ನಿವೃತ್ತರಾದ ಮಹಮ್ಮದ್ ರಿಜ್ವಾನ್, ಇಂದ್ರಣ್ಣ, ಬಸವರಾಜಪ್ಪ, ಸಿದ್ದರಾಮಣ್ಣ ಅವರನ್ನು ಸನ್ಮಾನಿಸಲಾಯಿತು. ಗುಂಪು ಆಟಗಳಾದ ಫುಟ್‌ಬಾಲ್, ವಾಲಿಬಾಲ್, ಥ್ರೋಬಾಲ್, ಕಬ್ಬಡಿ, ಬಾಸ್ಕೆಟ್ ಬಾಲ್ ಆಟಗಳು ನಡೆದವು. ಸೆ. 12ರಂದು ಬೆಳಗ್ಗೆ 6ಕ್ಕೆ ಬಾಲಕ-ಬಾಲಕಿಯರ ಗುಡ್ಡಗಾಡು ಓಟ, 9ಕ್ಕೆ ಅಥ್ಲೇಟಿಕ್ಸೃ್ ಕ್ರೀಡೆಗಳು ನಡೆಯಲಿವೆ.
ಕಾಲೇಜಿನ ಪ್ರಾಚಾರ್ಯ ಎಚ್.ಬಿ.ನರಸಿಂಹಮೂರ್ತಿ, ಉಪನ್ಯಾಸಕ ಡಾ.ಬಿ.ಕೃಷ್ಣಪ್ಪ, ಅಭಿವೃದ್ಧಿ ಸಮಿತಿ ಸದಸ್ಯರಾದ ಮಹೇಶ್‌ಬಾಬು, ಆರ್.ಮಂಜುನಾಥ್, ಎನ್.ನರಸಿಂಹಮೂರ್ತಿ, ಬಿ.ಆರ್.ಶಿವಕುಮಾರ್, ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ, ಕ್ರೀಡಾ ಸಂಚಾಲಕ ಎ.ಎಸ್.ರಂಗಪ್ಪ ಇತರರಿದ್ದರು.