ಗುರುಮಠಕಲ್ ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಶರಣಗೌಡ ಕಂದಕೂರ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. 
ಜಿಲ್ಲೆ

ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ

ಗುರುಮಠಕಲ್: ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಅವರ ದೈಹಿಕ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಗುರುಮಠಕಲ್ ಮತ್ತು ಕೊಂಕಲ್ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಹಂತದಲ್ಲಿ ಪ್ರತಿ ಮಕ್ಕಳು ಕಡ್ಡಾಯವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರದಲ್ಲಿ ಕ್ರೀಡಾಕೂಟಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ಶಾಲಾ ಮಟ್ಟದ ಶಿಕ್ಷಣಕ್ಕೆ ಶಿಕ್ಷಕರು ಹೆಚ್ಚಿನ ಒತ್ತು ನಿಡಬೇಕು. ಮುಂಬರುವ ದಿನಗಳಲ್ಲಿ ಅಕ್ಷರ ಅನುಷ್ಠಾನ ಯೋಜನೆಯಡಿ ಕ್ರೀಡಾ ಕಿಟ್ ನೀಡಲಾಗುವುದು. ಜತೆಗೆ ಕ್ರೀಡೆಗೆ ಅನುಕೂಲವಾದ ಕ್ರೀಡಾಂಗಣ, ಶಾಲಾ ಆಟದ ಮೈದಾನ, ಮೂಲಭೂತ ಸೌಕರ್ಯ ಒದಗಿಸಿ ದೈಹಿಕ ಶಿಕ್ಷಕರ ಕೊರತೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಿ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕ್ಷೇತ್ರದ ಕೀರ್ತಿ ಹೆಚ್ಚಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಖಾಸಾಮಠದ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ವೇಳೆ ಜೆಡಿಎಸ್ ಮುಖಂಡ ಶರಣು ಅವಂಟಿ, ಕಿಷ್ಟಾರೆಡ್ಡಿ ಪೊಲೀಸ್ ಪಾಟೀಲ್, ಜಿ.ತಮ್ಮಣ್ಣ, ಪ್ರಕಾಶ ನೀರಟ್ಟಿ, ಬಸಣ್ಣ ದೇವರಳ್ಳಿ, ಬಾಲು ದಾಸರಿ, ರವಿರೆಡ್ಡಿ ಗವಿನೋಳ, ರವೀಂದ್ರ ಚವ್ಹಾಣ್, ಸಂತೋಷಕುಮಾರ ನೀರಟ್ಟಿ, ನಾರಾಯಣರೆಡ್ಡಿ ಚಪೆಟ್ಲಾ, ಅನೀಲಕುಮಾರ, ಸುನೀಲ ಶುಕ್ಲಾ, ಆಂಜನೇಯ, ಲಕ್ಷ್ಮೀಕಾಂತರೆಡ್ಡಿ, ಶಿವಾರೆಡ್ಡಿ, ನರಸಪ್ಪ, ಚನ್ನಾರೆಡ್ಡಿ, ನರಸರೆಡ್ಡಿ ಇಟ್ಕಲ್, ವಿಜಯಕುಮಾರ, ದೇವಿಂದ್ರಪ್ಪ, ಮಲ್ಲೇಶಪ್ಪ, ಸುನೀಲ್, ಪೀರ ಅಹ್ಮದ್ ಇದ್ದರು.