ಜಿಲ್ಲೆ

ಕ್ರೀಡೆಯಿಂದ ಒತ್ತಡ ನಿವಾರಣೆ

ಬಳ್ಳಾರಿ : ನಿತ್ಯದ ಕೆಲಸದಿಂದ ಪ್ರತಿಯೊಬ್ಬರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕ್ರೀಡೆ ಹಾಗೂ ಯೋಗದಲ್ಲಿ ತೊಡಗುವುದರಿಂದ ಒತ್ತಡ ನಿವಾರಣೆ ಮಾಡಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಹಾಗೂ ಅಧಿಕಾರಿಗಳು ಮತ್ತು ಕಾರ್ಮಿಕ ಸಿಬ್ಬಂದಿ ಸಹಯೋಗದೊಂದಿಗೆ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಲಸದ ನಡುವೆಯು ಆರೋಗ್ಯವನ್ನು ಕಾಪಾಡಿಕೊಳ್ಳವುದು ಸವಾಲ್‌ಯಾಗಿ ಪರಿಣಾಮಿಸಿದೆ. ಇತ್ತೀಚಿನ ಆಹಾರ ಪದ್ಧತಿಗಳಿಂದ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಸಾರಿಗೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಾನಸಿಕ ಒತ್ತಡದ ಜತೆಯಲ್ಲಿ ಹಾಗೂ ದೈಹಿಕವಾಗಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ, ಎಲ್ಲ ಸಿಬ್ಬಂದಿಯುವರು ಯೋಗ, ವ್ಯಾಯಾಮ ಹಾಗೂ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಾಲಿಬಾಲ್, ಕ್ರಿಕೆಟ್, ರನ್ನಿಂಗ್, ಬೆಂಕಿ ಇಲ್ಲದ ತಿಂಡಿ ತಯಾರಿಸುವುದು, ಕುರ್ಚಿ ಆಟ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಹಿಳಾ ಹಾಗೂ ಪುರುಷರ ಸಿಬ್ಬಂದಿ ಭಾಗವಹಿಸಿದರು.