ಬಾಗಲಕೋಟೆ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ,ಸ್ಪರ್ದಾತ್ಮಕ ಮನೋಭಾವದಿಂದ ಬಾಗವಹಿಸುವುದು ಮುಖ್ಯ ಎಂದು ಬಿ.ವಿ.ವಿ.ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾಯಾ೯ಧ್ಯಕ್ಷ ಗುರುಬಸವ ಸೂಳಿಬಾವಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಬಿ.ವ್ಹಿ.ವ್ಹಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ ಮಹಿಳಾ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ವಿವಿಧ ಮಹಾವಿದ್ಯಾಲಯಗಳ 2024 ನೇ ಸಾಲಿನ ಅಂತರ್ ಕಾಲೇಜುಗಳ ಮಹಿಳಾ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳಿಂದ 16 ತಂಡಗಳು ಆಗಮಿಸಿದ್ದು ಹೆಮ್ಮೆಯ ವಿಷಯ, ಕ್ರೀಡಾಪಟುಗಳು ಕ್ರೀಡೆಯಲ್ಲಿ ಸ್ಪರ್ದಾತ್ಮಕ ಮನೋಭಾವದಿಂದ ಭಾಗವಹಿಸುವುದು ಮುಖ್ಯ,ವಾಲಿಬಾಲ ಅತೀ ಉತ್ಸಾಹದ ಕ್ರೀಡೆಯಾಗಿದೆ, ಮಾನಸಿಕ ಗಟ್ಟಿತನ ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳು ಮುಖ್ಯ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಪದನಿಮಿತ್ಯ ಕಾರ್ಯದರ್ಶಿಗಳಾದ ಡಾ. ಎಸ್, ಎಂ. ಗಾಂವಕರ ಮಾತನಾಡಿ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು,
ಬಿ.ವಿ.ವಿ.ಸಂಘದ ಸದಸ್ಯರಾದ ಶರಣ್ ನಾವಲಗಿ, ಪ್ರಾಚಾರ್ಯ ಎಸ್.ಜೆ.ಒಡೆಯರ, ವಿಶ್ವವಿದ್ಯಾಲಯದ ಆಯ್ಕೆ ಸಮಿತಿಯ ಸದಸ್ಯರಾಗಿ ಡಾಕ್ಟರ್ ವಿಶ್ವನಾಥ್ ನಡಕಟ್ಟಿ ಹಾಗೂ ಸುನೀಲ್ ನಡಕಟ್ಟಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಶ್ರೀಮತಿ ಎಮ್ ವ್ಹಿ ಬಾಜಪ್ಪನವರ ಹಾಗೂ ಐಕ್ಯೂಎಸಿ ಸಂಯೋಜಕರಾದ ಪಿ. ಕೆ. ಚೌಗಲಾ ಉಪಸ್ಥಿತರಿದ್ದರು,