ಜಿಲ್ಲೆ

ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ

ಕೆಂಭಾವಿ: ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ ಆದರೆ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಮಾತ್ರ ಆಟವಾಡಬೇಕು ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಹೇಳಿದರು.

ಪಟ್ಟಣದ ಎಸ್‌ಬಿಸಿ ಕ್ಯಾಂಪ್ ಬ್ಯಾಡ್ಮಿಂಟನ್ ಗ್ರೌಂಡ್‌ನಲ್ಲಿ ಎಕ್ಸ್ಟ್ರೀಮ್ ಬ್ಯಾಡ್ಮಿಂಟನ್ ಕ್ಲಬ್ ಸೋಮವಾರ ಹಮ್ಮಿಕೊಂಡ ಜಿಲ್ಲಾ ಮಟ್ಟದ ಓಪನ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡಮಟ್ಟದ ಆಯೋಜನೆ ಮಾಡುವಂತಾಗಲಿ ಎಂದರು.

ಈಗಾಗಲೇ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದು, ಇದಕ್ಕಾಗಿ ಸ್ಥಳ ಪರಿಶೀಲನೆ ನಡೆದಿದೆ ಎಂದು ಹೇಳಿದರು.

ಹಿರಿಯ ವರದಿಗಾರ ಸಂಜೀವರಾವ ಕುಲಕರ್ಣಿ ಮಾತನಾಡಿದರು. ಪುರಸಭೆ ಸದಸ್ಯ ರವಿಶಂಕರ ಸೊನ್ನದ, ಪುರಸಭೆ ಮಾಜಿ ಸದಸ್ಯ ಮಹಿಪಾಲರೆಡ್ಡಿ ಡಿಗ್ಗಾವಿ, ಶಿಕ್ಷಕ ಬಂದೇನವಾಜ ನಾಲತವಾಡ, ಸಾಹೇಬ್‌ಲಾಲ್ ಆಂದೇಲಿ, ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ್, ಕೆಬಿಎನ್ ಬಂದೇನವಾಜ, ಹನುಮಯ್ಯ ಗುತ್ತೇದಾರ್, ಸಯ್ಯದ್ ಕಲೀಮ್ ಪಾಶಾ, ರಫೀಕ್ ವಡಕೇರಿ, ರಸೂಲ್‌ಸಾಬ್, ಮಹಿಬೂಬ್ ಸಾಬ್ ನಾಶಿ, ಮಾಸುಮಸಾಬ್ ನಾಶಿ, ಮಾಳಪ್ಪ ಸುಂಕದ, ಸಲೀಂ ಪೇಶಮಾಮ, ಪರಶುರಾಮ ನಾರಾಯಣಕರ, ನಂದಪ್ಪ ಕವಲ್ದಾರ, ನಯೂಮ ಖಾಜಿ, ಮರೆಪ್ಪ ಕಟ್ಟಿಮನಿ ಇತರರಿದ್ದರು. ಸುಗೂರಯ್ಯ ಇಂಡಿ ಸ್ವಾಗತಿಸಿದರು. ಸೋಹೆಲ್ ಸಾಸನೂರ ವಂದಿಸಿದರು. ತಿರುಪತಿ ನಿರೂಪಣೆ ಮಾಡಿದರು. ಯಾದಗಿರಿ ಪ್ರಥಮ, ಶಹಾಪುರ ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಹುಣಸಗಿ ತಂಡ ಪಡೆದುಕೊಂಡಿತು.

ನೂತನ ಪದಾಧಿಕಾರಿಗಳು: ಈ ವೇಲೆ ಎಕ್ಸ್ಟ್ರೀಮ್ ಬ್ಯಾಡ್ಮಿಂಟನ್ ಕ್ಲಬ್ನ್ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ್ (ಗೌರವಾಧ್ಯಕ್ಷ), ಮಹಿಪಾಲರೆಡ್ಡಿ ಡಿಗ್ಗಾವಿ (ಅಧ್ಯಕ್ಷ), ಹಣಮಯ್ಯ ಗುತ್ತೇದಾರ(ಉಪಾಧ್ಯಕ್ಷ), ಸೋಹೇಲ್ ಸಾಸನೂರ (ಕಾರ್ಯದರ್ಶಿ), ಸುಗೂರಯ್ಯ ಇಂಡಿ (ಖಜಾಂಚಿ).