ಹೊಳೆನರಸೀಪುರ: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಭವಾನಿ ರೇವಣ್ಣ ಮತ್ತು ಎಚ್ ಡಿ ರೇವಣ್ಣನವರ ಸಹಯೋಗದಲ್ಲಿ ಆಯೋಜಿಸಿದ್ದ ಹೊಳೆನರಸೀಪುರ ಸ್ಟೇಡಿಯಂ ನಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಹೇಮಾವತಿ ಒಳ ಕ್ರೀಡಾಂಗಣದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಇನ್ನೂ ಒಂದುವರೆ ಕೋಟಿ ಹಣದ ಅವಶ್ಯಕತೆ ಇದ್ದು ತುರ್ತಾಗಿ ಉಳಿದಿರುವ ಸಣ್ಣ ಪುಟ್ಟ ಕೆಲಸ ಮುಗಿಸುವುದಾಗಿ ಹೇಳಿದ ಅವರು ಒಳ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್ಬಾಲ್, ಚೆಸ್, ಬ್ಯಾಡ್ಮಿಂಟನ್, ಕಬ್ಬಡ್ಡಿ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಸಹ ಆಯೋಜಿಸಲು ಸಹಕರಿಯಾಗುತ್ತದೆ ಪಟ್ಟಣದ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಹೆಚ್ಚು, ತೊಡಗಿಸಿಕೊಂಡು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಸಹಕಾರಿಯಾಗುತ್ತದೆ ಕ್ರೀಡೆಯಿಂದ ವಂಚಿತರಾಗದಂತೆ ಎಲ್ಲಾ ಪ್ರಯತ್ನವನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಜಿಲ್ಲೆಯ ವಿವಿದೆಡೆ ಯಿಂದ ಒಟ್ಟು 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು ಮೊದಲ ಸ್ಥಾನ ಗೆದ್ದ ತಂಡಕ್ಕೆ 1,50,000 ನಗದು ಮತ್ತು ಆಕರ್ಷಕ ಪಲ್ಸರ್ 125 ಎನ್ ಎಸ್ ಟೈರ್ ಬಹುಮಾನ ಇರುತ್ತದೆ. ದ್ವಿತೀಯ ಬಹುಮಾನ ಒಂದು ಲಕ್ಷ ಹಾಗೂ ತೃತೀಯ ಬಹುಮಾನ 50,000 ನಗದು ಜೊತೆಗೆ ಆಕರ್ಷಕ ಟ್ರೋಫಿಯನ್ನು ಸಹ ಕೊಡಲಾಗುತ್ತಿದೆ ಪ್ರತಿ ತಂಡಕ್ಕೆ ಕೇವಲ ಆರು ಓವರ್ ಮಾತ್ರ ಇರುತ್ತದೆ ಎಂದು ಹೇಳಿದರು.
ಇಂತಹ ಕ್ರೀಡೆಯನ್ನು ಆಯೋಜಿಸುವುದರಿಂದ ಯುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಸೋಲು ಗೆಲುವು ಎರಡನ್ನು ಸಹ ಸಮಾನವಾಗಿ ಸ್ವೀಕರಿಸಿ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಕ್ರೀಡೆಯಲ್ಲಿ ಭಾಗವಹಿಸಿ ಕೀರ್ತಿ ತಂದುಕೊಡಬೇಕೆಂದರು ಇದೇ ಸಂದರ್ಭದಲ್ಲಿ ಉಮೇಶ್, ನಿಧಿ, ದರ್ಶನ್, ಮಧು ಹೆಚ್ ಡಿ ,ಆರ್ ರವಿ ಮತ್ತಿತರದಿದ್ದರು.