ಜಿಲ್ಲೆ

ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಮುಂದಾಗಿ

ಕಿಕ್ಕೇರಿ: ಪಠ್ಯದೊಂದಿಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.


ಸಮೀಪದ ಆಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಟಿವಿ, ಮೊಬೈಲ್ ನೋಡುವ ಬದಲು ನಿತ್ಯ ಸಂಜೆ, ಬೆಳಗ್ಗೆ ಒಂದಷ್ಟು ಸಮಯ ಕ್ರೀಡೆಗೆ ಮೀಸಲಿಟ್ಟುಕೊಳ್ಳಿ. ಸಕಾರಾತ್ಮಕ ಆಲೋಚನೆಗೆ ಕ್ರೀಡೆ ಸಹಕಾರಿ ಎಂದರು.


ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿಗೌಡ, ಮುಖ್ಯಶಿಕ್ಷಕ ರಂಗನಾಥ್, ನಿವೃತ್ತ ಮುಖ್ಯಶಿಕ್ಷಕ ಪಿ.ಜೆ.ವೆಂಕಟರಾಮು, ಗ್ರಾಪಂ ಸದಸ್ಯ ನಿಂಗರಾಜು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಿ. ನಾಗರಾಜು, ತುಳಸಿರಾಮ್, ಸೋಮಶೇಖರ್, ರಂಗನಾಥ್, ಪ್ರತಾಪ್, ರವಿ, ಮಧು ಮತ್ತಿತರರಿದ್ದರು.