ಸುರೇಬಾನ ಗ್ರಾಮದಲ್ಲಿ ಏರ್ಪಡಿಸಿದ್ದ ಮುಕ್ತ ಕೇರಂ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಮುಖಂಡ ಪಿ.ಎಫ್. ಪಾಟೀಲ ಮಾತನಾಡಿದರು. ವಿ.ಬಿ. ಸಿದ್ದಾಟಗಿಮಠ, ನಿಂಗಪ್ಪ ಮೆಳ್ಳಿಕೇರಿ ಇತರರಿದ್ದರು. 
ಜಿಲ್ಲೆ

ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯ ಹೆಚ್ಚಳ

ರಾಮದುರ್ಗ, ಬೆಳಗಾವಿ
ಯುವಕರು ದುಶ್ಚಟಗಳಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ. ಯವ ಜನತೆ ಕೇರಂನಂತಹ ಚಾಣಾಕ್ಷತೆ, ಬುದ್ಧಿಶಕ್ತಿ ಹೆಚ್ಚಿಸುವ ಜತೆಗೆ ದೈಹಿಕ ವ್ಯಾಯಾಮ ಸಿಗುವ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಎಂದು ಬಿಜೆಪಿ ಮುಖಂಡ ಪಿ.ಎಫ್. ಪಾಟೀಲ ಕರೆ ನೀಡಿದರು.

ಸುರೇಬಾನದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶಬರಿದೇವಿ ಯುವಕ ಮಂಡಳ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಕ್ತ ಕೇರಂ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಸೋಲು ಮುಂದಿನ ಗೆಲುವಿಗೆ ದಾರಿ ಮಾಡಿಕೊಡುತ್ತದೆ ಎಂದು ಅರಿತು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು. ಕ್ರೀಡೆ ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣಾ ಕಾರ್ಯಕ್ರಮಗಳಿಗೆ ಸಕಲ ಸಹಾಯ ಸಹಕಾರ ನೀಡುತ್ತೇನೆ ಎಂದರು.

ನ್ಯಾಯವಾದಿ ವಿ.ಬಿ. ಸಿದ್ದಾಟಗಿಮಠ ಮಾತನಾಡಿ, ಸ್ಪರ್ಧೆಯಲ್ಲಿ ವಿಜೇತ ಮೂರು ಬಹುಮಾನಗಳನ್ನು ಪಿ.ಎಫ್. ಪಾಟೀಲ ಅಭಿಮಾನಿ ಬಳಗದವರು
ನೀಡಿ ಕ್ರೀಡೆಯನ್ನು ಪ್ರೋತ್ಸಾಹಿಸಿದ್ದಾರೆ. ಸಮಾಜ ಸೇವೆ ಮಾಡುತ್ತಿರುವ ಬಿಜೆಪಿ ಮುಖಂಡ ಪಿ.ಎಫ್. ಪಾಟೀಲರ ಕಾರ್ಯ ಶ್ಲಾಘನೀಯ ಎಂದರು.

ಜಿಪಂ ಮಾಜಿ ಸದಸ್ಯ ನಿಂಗಪ್ಪ ಮೆಳ್ಳಿಕೇರಿ, ದೇಸಾಯಿಗೌಡ ಪಾಟೀಲ, ಶ್ರೀಶೈಲ ಮೆಳ್ಳಿಕೇರಿ, ಪ್ರಭುಗೌಡ ಪಾಟೀಲ, ಇಮಾಮಸಾಬ್ ಮುಜಾವರ್, ಮಹಾಂತೇಶಗೌಡ ಪಾಟೀಲ, ಯಮನಪ್ಪ ಬೆಳಗಂಟಿ, ಬಸಪ್ಪ ಬನ್ನಿಮರದ, ಚೇತನ ಗಾಣಿಗೇರ, ಈಶ್ವರ ಮೆಳ್ಳಿಕೇರಿ, ಹುಸೇನ್ ಬೇಾರಿ, ಮಹ್ಮದ್ ಅಗಸರ, ಮಹಾಂತೇಶ ಮೆಳ್ಳಿಕೇರಿ, ರಾಮನಗೌಡ ನಡಮನಿ, ಶಿವಪ್ಪ ಮದಕಟ್ಟಿ ಇತರರಿದ್ದರು.