ಹಲಗೂರು: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ವಿಜೇತಳಾಗಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಗೊಲ್ಲರಹಳ್ಳಿ ಗ್ರಾಮದ ನಿವಾಸಿ ಸರಸ್ವತಿ ಮತ್ತು ಶಿವು ಅವರ ಪುತ್ರಿ ಜಿ.ಎಸ್.ಕೀರ್ತನಾಗೆ ಗ್ರಾಮ ಪಂಚಾಯಿತಿಯಿಂದ 5 ಸಾವಿರ ರೂ. ಪ್ರೋತ್ಸಾಹ ಧನದ ಚೆಕ್ ಅನ್ನು ಪಿಡಿಒ ಮಲ್ಲಿಕಾರ್ಜುನ, ಸದಸ್ಯ ರಾಜೇಶ್ ವಿತರಿಸಿದರು.
ಗ್ರಾಪಂ ಸದಸ್ಯ ರಾಜೇಶ್ ಮಾತನಾಡಿ, ಗ್ರಾಮದ ಕ್ರೀಡಾಪಟು ಜಿ.ಎಸ್.ಕೀರ್ತನಾ ದಿವ್ಯಜೋತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದರಿಂದ ಗ್ರಾಪಂನಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.