ಅರಕಲಗೂಡಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 
ಜಿಲ್ಲೆ

ಕ್ರೀಡಾಕೂಟದಲ್ಲಿ ದೊಡ್ಡಮಗ್ಗೆ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಅರಕಲಗೂಡು: ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ.

ಬಾಲಕಿಯರ ವಿಭಾಗದ ಗುಂಡು ಎಸೆತದಲ್ಲಿ ಎಂ.ಆರ್. ನಿತ್ಯಾ ಪ್ರಥಮ, 5 ಸಾವಿರ ಮೀ. ಬಾಲಕರ ಓಟದಲ್ಲಿ ಶಶಿಕುಮಾರ್, ಬಾಲಕರ ಉದ್ದ ಜಿಗಿತದಲ್ಲಿ ಎಂ.ಆರ್.ಸೃಜನ್, 5 ಸಾವಿರ ಮೀ. ಬಾಲಕರ ನಡಿಗೆಯಲ್ಲಿ ಮನೋಜ್ ಪ್ರಥಮ ಸ್ಥಾನಗಳಿಸಿದ್ದಾರೆ. ಬಾಲಕರ ಖೋ ಖೋ ಪಂದ್ಯದಲ್ಲಿ ರೋಹಿತ್ ಪ್ರಸಾದ್ ತಂಡ, ಬಾಲಕರ ಡಿಸ್ಕಸ್ ಥ್ರೋನಲ್ಲಿ ಎಲ್.ಆಕಾಶ್, ಬಾಲಕರ ಭರ್ಜಿ ಎಸೆತದಲ್ಲಿ ಎ.ಎಲ್.ಯಶ್ವಂತ್, ಬಾಲಕರ 1500 ಮೀ. ಓಟದಲ್ಲಿ ಶಶಿಕುಮಾರ್, ಬಾಲಕರ 5 ಸಾವಿರ ಮೀ. ನಡಿಗೆಯಲ್ಲಿ ಎ.ಎಸ್ . ಸುಜಿತ್, ಬಾಲಕರ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಕೆ.ಎಸ್.ಅರವಿಂದ ತಂಡ, ಬಾಲಕಿಯರ ಷಟಲ್ ಬ್ಯಾಡ್ಮಿಂಟನ್ ಜೀವಿತಾ ತಂಡ ದ್ವಿತೀಯ ಸ್ತಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಫರ್ಜಾನ ಅಂಜುಂ ತಿಳಿಸಿದ್ದಾರೆ.