ಜಿಲ್ಲೆ

ಕ್ರೀಡಾಕೂಟಗಳಿಂದ ಉತ್ಸಾಹ ಇಮ್ಮಡಿ

ಗೋಕಾಕ: ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಸಿ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಮೂಡುತ್ತದೆ ಎಂದು ಕೆಎಲ್​ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.

ನಗರದ ಕೆಎಲ್​ಇ ಶಾಲೆಯಲ್ಲಿ ಶಿಕರ ದಿನಾಚರಣೆ ನಿಮಿತ್ತ ಸ್ಥಳಿಯ ಕೆಎಲ್​ಇ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಎಲ್​ಇ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಲ್ಲಿ ಸೋಲು ಗೆಲುವಿಗೆ ಮಹತ್ವ ನೀಡದೆ ಪ್ರತಿಭೆ ಪ್ರದರ್ಶಿಸಬೇಕು. ಕ್ರೀಡಾಕೂಟಗಳ ಆಯೋಜನೆಯಿಂದ ಎಲ್ಲರಲ್ಲೂ ಪಾಲ್ಗೊಳ್ಳುವ ಉತ್ಸಾಹ ಮೂಡುತ್ತದೆ. ಇದು ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ಎಂದರು. ಸ್ಥಳಿಯ ಕೆಎಲ್​ಇ ಸಂಸ್ಥೆಗಳ ಮುಖ್ಯಸ್ಥರಾದ ಎಂ.ಡಿ. ಚುನಮರಿ, ಓಂಪ್ರಕಾಶ ಅಂಗಡಿ, ರೂಪಾ ಮುನವಳ್ಳಿ, ಡಾ.ಧರೆಪ್ಪ ಚೌಗಲಾ, ಜಿ.ಎಂ. ಅಂದಾನಿ, ಕೆ.ಬಿ. ಮೇವುಂಡಿಮಠ, ಡಾ.ಈರಣ್ಣ ಕಾಜಗಾರ, ಅಮೃತ ಜಕ್ಕಲಿ, ಮಂಜುನಾಥ ಕಂಬಾರ, ಪ್ರಶಾಂತ ಕಿವಟಿ, ಜಿ.ಎಂ. ಬಿರಾದಾರ, ನಂದಾ ಚುನಮರಿ, ಮನಿಷಾ ಮಾಂಗಳೇಕರ ಇದ್ದರು.